ವಿಜಯಪುರ: ಕೇವಲ 300 ರೂ. ರೂಪಾಯಿಗೆ ಯುವಕನೋರ್ವ ತನ್ನ ಆತ್ಮೀಯ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ವಿಜಯಪುರ ಪೊಲೀಸ್‌ಠಾಣೆಯ ಕೂದಲಳತೆಯಲ್ಲೇ ನಡೆದಿದೆ.
ಕೊಲೆಯಾದ ಯುವಕನನ್ನು ವೀರೇಶ್ ಎಂದು ಗುರುತಿಸಲಾಗಿದೆ. ಆರೋಪಿ ಜಾವೇದ ಹಾಗೂ ಕೊಲೆಯಾಗಿರುವ ವೀರೇಶ ಇಬ್ಬರೂ ಸ್ನೇಹಿತರು. ಅಲ್ಲದೇ ಇಬ್ಬರು ಸಣ್ಣಪುಟ್ಟ ಕಳ್ಳತನಗೈದು ಜೈಲಿಗೆ ಹೋಗಿ ಬಂದಿದ್ದಾರೆ.
ಪೊಲೀಸರು ಇಬ್ಬರ ಮೇಲೂ ಎಂಓಬಿ ಕಾರ್ಡ್ ಓಪನ್ ಮಾಡಿದ್ದರು. ಆದ್ರೆ ಮುನ್ನೂರು ರೂಪಾಯಿ ಹಣಕ್ಕಾಗಿ ಇಬ್ಬರ ಮಧ್ಯೆ ಜಗಳವಾಗಿ ಕೊಲೆಯಾಗಿದೆ. ಅಲ್ಲದೆ ಆರೋಪಿ ಜಾವೀದ್ ವೀರೇಶ್ನಿಗೆ ಪದೇ ಪದೇ ದರೋಡೆಗೆ ಒತ್ತಾಯಿಸುತ್ತಿದ್ದನಂತೆ.
PublicNext
09/06/2022 07:52 am