ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ:ಬೆಂಕಿ ನಂದಿಸಲು ಬಂದಾತ ಚಿನ್ನದ ಬಾಕ್ಸ್ ಗೆ ಕೈ ಇಟ್ಟ!

ಉಪ್ಪಿನಂಗಡಿ: ಮನೆಗೆ ಬೆಂಕಿ ಬಿದ್ದಾಗ ಆಪತ್ಬಾಂಧವನಂತೆ ಬಂದು ಮನೆಯ ಕಪಾಟಿನೊಳಗಿದ್ದ ಚಿನ್ನಾಭರಣ ಪೆಟ್ಟಿಗೆಯನ್ನೇ ಎಗರಿಸಿದವನನ್ನು ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

ಮುಂಡೂರು ಗ್ರಾಮದ ಮೇಲಂತಬೆಟ್ಟು ನಿವಾಸಿ ಲಕ್ಷ್ಮಣ ಗೌಡರ ಪುತ್ರ ಶಿವಪ್ರಸಾದ್ (38) ಬಂಧಿತ ಆರೋಪಿ.

ಕಳೆದ ಮೇ 16 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮಲೆಂಗಲ್ ಎಂಬಲ್ಲಿನ ಆನಂದ್ ಮೂಲ್ಯ ಎಂಬವರ ಮನೆಗೆ ಬೆಂಕಿ ತಗುಲಿತ್ತು. ಮನೆಯವರು ಇಲ್ಲದಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರು.

ಬೆಂಕಿಗೆ ಬಟ್ಟೆ ಬರೆ, ಕ್ಯಾಮರಾದ ಪರಿಕರಗಳು ಸುಟ್ಟು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು ಯಥಾ ಸ್ಥಿತಿಯಲ್ಲಿದ್ದವು. ಈ ಬಗ್ಗೆ ಸಮಾಧಾನ ಹೊಂದಿದ್ದ ಅವರು, ಅದನ್ನು ಓಪನ್ ಮಾಡಿ ನೋಡಿರಲಿಲ್ಲ. ಮೇ 30 ರಂದು ಮನೆಯೊಳಗಿನ ಎಲ್ಲಾ ವಸ್ತುಗಳನ್ನು ಜೋಡಿಸುತ್ತಿದ್ದಾಗ ಚಿನ್ನ ಇಡುವ ಬಾಕ್ಸ್ನೊಳಗಿದ್ದ ಸುಮಾರು 2.50 ಲಕ್ಷ ರೂ. ಮೌಲ್ಯದ ವಿವಿಧ ಆಭರಣಗಳು ನಾಪತ್ತೆಯಾಗಿತ್ತು.

ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By :
PublicNext

PublicNext

08/06/2022 09:50 pm

Cinque Terre

33.03 K

Cinque Terre

1