ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾವಿ ಪತಿಯನ್ನೇ ಬಂಧಿಸಿದ್ದ ಅಸ್ಸಾಂನ ಲೇಡಿ ಸಿಂಗಂ ಅರೆಸ್ಟ್!

ದಿಸ್ಪುರ್: ಭ್ರಷ್ಟಾಚಾರ ಆರೋಪದ ಮೇಲೆ ಭಾವಿ ಪತಿಯನ್ನೇ ಬಂಧಿಸಿದ್ದ ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ ಮೊನಿ ರಬ್ಬಾ ಇದೀಗ ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಅಸ್ಸಾಂನ ನಾಗೋನ್ ಜಿಲ್ಲೆಯ ಸಬ್ ಇನ್‌ಸ್ಪೆಕ್ಟರ್ ಆಗಿರುವ ಜುನ್ ಮೊನಿ ರಬ್ಬಾ ಮಾಜಿ ಗೆಳೆಯನೊಂದಿಗೆ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ನ್ಯಾಯಾಲಯವು ಜುನ್ ಮೊನಿ ರಬ್ಬಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ರಬ್ಬಾಸ್ ಮಾಜಿ ಗೆಳೆಯ ರಾಣಾ ಪರಾಗ್ ನೊಂದಿಗೆ ನಾವು ಹಣಕಾಸು ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದು, ಮಜುಲಿಗೆ ವರ್ಗಗೊಂಡು ಬಂದಾಗ ಜುನ್ ಮೊನಿ ರಬ್ಬಾ ಅವರು ತಮ್ಮ ಗೆಳೆಯನನ್ನು ಪರಿಚಯಿಸಿದ್ದರಿಂದ ನಾವು ವ್ಯವಹಾರ ಮಾಡಿದ್ದೆವು. ಆದರೆ ಅವರು ನಮಗೆ ವಂಚಿಸಿದ್ದಾರೆ ಎಂದು ಇಬ್ಬರು ಗುತ್ತಿಗೆದಾರರು ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಪರಾಗ್ ಅವರನ್ನು ಒಎನ್ ಜಿಸಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಜುನ್ ಮೊನ್ ರಬ್ಬಾ ಬಂಧಿಸಿದ್ದರು. ಇದೇ ವೇಳೆ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.

Edited By : Vijay Kumar
PublicNext

PublicNext

05/06/2022 03:36 pm

Cinque Terre

37.12 K

Cinque Terre

1