ಬೆಂಗಳೂರು: ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ಸ್ಯಾಂಡಲ್ ವುಡ್ ನಿರ್ಮಾಪಕ ವಂಚೆನೆಗೆ ಇಳಿದ್ದಾನೆ. ಸದ್ಯ ಈ ವಂಚನೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನ ರಾಜಾಜಿನಗರ ಪೊಲೀಸ್ರು ಬಂಧಿಸಿದ್ದಾರೆ.
ಕಾಮಿಡಿ ಸ್ಟಾರ್ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣ ಮಾಡಿದ್ದ ಆರೋಪಿ ಮಂಜುನಾಥ್, ಕೋಟ್ಯಾಂತರ ರೂಪಾಯಿ ಹಾಕಿ ಸಿನಿಮಾ ನಿರ್ಮಾಣ ಮಾಡಿದ್ರು.ಸಿನಿಮಾ ರಿಲೀಸ್ ಆಗಿದ್ರು ಯಶಸ್ವಿಯಾಗದೆ ಬ್ಯುಸಿನೆಸ್ ಲಾಸ್ ಆಗಿತ್ತು.ಈ ಬೆನ್ನಲ್ಲೇ ರಾಜಾಜಿನಗರದಲ್ಲಿ ಮಂಜುನಾಥ್ ರಿಯಲ್ ಎಸ್ಟೇಟ್ ಕಂಪನಿ ತೆಗೆದಿದ್ರು.
ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಕಂಪನಿ ಹೆಸರಲ್ಲಿ ಕಚೇರಿ ಓಪನ್ ಮಾಡಿನಿವೇಶನ ಮಾರಾಟ ಮಾಡುವುದಾಗಿ ನಿರ್ಮಾಪಕ ಮಂಜುನಾಥ್ ಜಾಹೀರಾತು ನೀಡಿದರು. ಜಾಹಿರಾತು ನೋಡಿ ನಿರ್ಮಾಪಕ ಮಂಜುನಾಥ್ ನನ್ನ ಹಲವರು ಸಂಪರ್ಕ ಮಾಡಿದ್ರು. ಇದ್ರಲ್ಲಿ ಪುಷ್ಪಕುಮಾರ್ ಕೂಡ ಹಣ ಹಾಕಿದ್ರು ಮಾಡಿದ್ರು.ಕಡಿಮೆ ಬೆಲೆಗೆ ಸೈಟ್ ಕೊಡಿಸೋದಾಗಿ ಹಂತ ಹಂತವಾಗಿ 2 ಲಕ್ಷ ಹಾಕಿಸಿಕೊಂಡಿದ್ದ ಮಂಜುನಾಥ್ ಬೇರೆ ಯಾರದ್ದೋ ಸೈಟ್ ತೋರಿಸಿ ಕೊಡಿಸೋದಾಗಿ ನಂಬಿಸಿ ಕೊನೆಗೆ ದಾಖಲೆಗಳು ಕೇಳಿದಾಗ ನಿರ್ಮಾಪಕನ ವಂಚನೆಜಾಲ ಬಯಲಾಗಿದೆ.
ಈ ಸಂಬಂಧ ಪುಷ್ಪಕುಮಾರ್ ರಾಜಾಜಿನಗರ ಠಾಣೆಗೆ ದೂರು ನೀಡಿದ್ರು.ದೂರು ದಾಖಲಿಸಿಕೊಂಡು ನಿರ್ಮಾಪಕ ಮಂಜುನಾಥ್ ಜೊತೆ ಗೆ ಆತನ ಸಹಚರರಾದ ಶಿವಕುಮಾರ್, ಗೋಪಾಲ್, ಚಂದ್ರಶೇಖರ್ ನನ್ನ ರಾಜಾಜಿನಗರ ಪೊಲೀಸ್ರು ಬಂಧಿಸಿದ್ದಾರೆ.
PublicNext
04/06/2022 10:26 am