ರಾಮನಗರ: ಚಾಕ್ಲೇಟ್ ಕೊಡಿಸ್ತೀನೆಂದು ಕರೆದುಕೊಂಡು ಹೋಗಿ 2 ವರ್ಷದ ಪುಟ್ಟ ಕಂದಮ್ಮನ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಆರೋಪಿಯನ್ನು ಸಾದಿರ್ ಪಾಷಾ (28) ಎಂದು ಗುರುತಿಸಲಾಗಿದೆ. ಆರೋಪಿ ಪಾಷಾ ಗುರುವಾರ ಮಧ್ಯಾಹ್ನ ಚಾಕ್ಲೇಟ್ ಕೊಡಿಸುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಗುವಿನ ಬಟ್ಟೆಯಲ್ಲಿ ರಕ್ತದ ಕಲೆ, ಮೈಮೇಲೆ ಗಾಯಗಳನ್ನು ಕಂಡು ಪೋಷಕರು ಗಾಬರಿಗೊಂಡು ಕೂಡಲೇ ಮಗುವನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಬಂಧ ಬಾಲಕಿ ತಾಯಿ ಮಾತನಾಡಿ, ನನ್ನ ಮಗಳನ್ನ ಚಾಕ್ಲೇಟ್ ಕೊಡಿಸುತ್ತೇನೆಂದು ಕರೆದುಕೊಂಡು ಹೋದರು. ನಮ್ಮ ಬಾವನೆ ಈ ಕೆಲಸ ಮಾಡಿದ್ದಾರೆ. ನಮಗೆ ಬಹಳ ನೋವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
PublicNext
03/06/2022 09:00 pm