ಚಂಡೀಗಢ: ಖ್ಯಾತ ಗಾಯಕ ಸಿಧು ಮೂಸೆವಾಲಾ ಮೇಲೆ ಮೊನ್ನೆ ನಡೆದ ಗುಂಡಿನ ದಾಳಿ ಭೀಕರವಾಗಿಯೇ ಇತ್ತು. ಬರೋಬ್ಬರಿ 25 ಗುಂಡುಗಳು ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿದ್ದವು. ಈ ಒಂದು ಘಟನೆ ಹಿಂದೆ ಮತ್ತೊಬ್ಬ ಗಾಯಕನ ಕೈವಾಡ ಇದೆ ಅನ್ನೋ ಮಾತು ಕೇಳಿ ಬರುತ್ತಿದೆ. ಅದಕ್ಕೆ ಆ ಗಾಯಕನೇ ಈಗ ಉತ್ತರ ಕೊಟ್ಟಿದ್ದಾರೆ.
ಪಂಜಾಬ್ ನ ಗಾಯಕ ಮಂಕಿರತ್ ಔಲಾಕ್ ಮೇಲೆನೆ ಈಗ ಅನುಮಾನ ಮೂಡಿದೆ. ಗಾಯಕ ಸಿಧು ಮೂಸೆವಾಲಾ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ಈ ಗಾಯಕ "ಹಾತ್" ಇದೆ ಅನ್ನೋ ಅನುಮಾನವೂ ಇದೆ. ಆದರೆ, ಇದೇ ಗಾಯಕ ವೀಡಿಯೋ ಮೂಲಕ ಅದೆಲ್ಲ ಸುಳ್ಳು ಸುದ್ದಿ. ಮಾಧ್ಯಮಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿವೆ ಅಂತಲೇ ಹೇಳಿಕೊಂಡಿದ್ದಾರೆ.
ಸಿಧು ಮೂಸೆವಾಲಾ ಫ್ಯಾಮಿಲಿಗೆ ಅದೆಷ್ಟು ದುಃಖ ಆಗಿದಿಯೋ ಅಷ್ಟೇ ಬೇಸರ ನನಗೂ ಆಗಿದೆ. ಮೂಸೆವಾಲಾ ಸಾವು ನನಗೂ ನೋವುಂಟು ಮಾಡಿದೆ ಅಂತಲೇ ಪಂಜಾಬಿ ಭಾಷೆಯಲ್ಲಿಯೇ ಗಾಯಕ ಮಂಕಿರತ್ ಔಲಾಕ್ ಮನದ ಮಾತು ತಿಳಿಸಿದ್ದಾರೆ.
PublicNext
01/06/2022 02:51 pm