ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಈಜಲು ಹೋಗಿ ಇಬ್ಬರು ಯುವತಿಯರು ಸಾವು

ರಾಯಚೂರು: ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.

ತನಾಜ್ (16) ಹಾಗೂ ಮುಸ್ಕಾನ್ (20) ಮೃತ ದುರ್ದೈವಿಗಳು. ಯುವತಿಯರು ಶವವಾಗಿ ಪತ್ತೆಯಾಗಿದ್ದಾರೆ. ಅತ್ತೆ ಮನೆಗೆ ಹೋದ ರಾಯಚೂರಿನ ಲಾಲ್ ಪಹಡಿ ಹಾಗೂ ಮಾಣಿಕ ನಗರ ನಿವಾಸಿಗಳಾದ ಯುವತಿಯರು ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನು ಬಾವಿಯಿಂದ ಮೃತ ದೇಹಗಳನ್ನು ಹೊರ ತೆಗೆಯುತ್ತಿಂದತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By : Vijay Kumar
PublicNext

PublicNext

30/05/2022 08:12 pm

Cinque Terre

26.35 K

Cinque Terre

1

ಸಂಬಂಧಿತ ಸುದ್ದಿ