ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ಲೋನ್ ಆ್ಯಪ್‌ಗಳನ್ನ ಬಳಸುವವರೇ ಎಚ್ಚರ ಎಚ್ಚರ!

ಬೆಂಗಳೂರು:ಮೊಬೈಲ್ ಲೋನ್ ಆ್ಯಪ್ ಹೆಸರಲ್ಲಿ ನಡಿತಿದೆ ಮಾನ ಹಾನಿ ಮಾಡಿ ಹಣ ಪೀಕುವ ಕೆಲಸ.ವಾಟ್ಸಾಪ್ ನಲ್ಲಿ ಬರೋ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಡೀಟೇಲ್ಸ್ ಅಪ್ ಲೋಡ್ ಮಾಡಿದ್ರೆ ನಿಮ್ಮ ಕತೆ ಮುಗಿತು. ನಿಮ್ಮ ಖಾಸಗಿ ಡೀಟೇಲ್ಸ್ ಅಪ್ ಲೋಡ್ ಮಾಡಿ ನೀವು ಲೋನ್ ಕೇಳಿಲ್ಲ ಅಂದ್ರು ನಿಮ್ಮ ಅಕೌಂಟ್ ಗೆ ಹಾಣ ಹಾಕ್ತಾರೆ. ಒಮ್ಮೆ ಖಾತೆಗೆ ಹಣ ಬಂದ್ರೆ ಮುಗಿತು, ಅಲ್ಲಿಂದ ಶುರುವಾಗುತ್ತೆ ನೋಡಿ ಲೋನ್ ಹಣದ ವಸೂಲಿ ಟಾರ್ಚರ್. ಲೋನ್ ಪೇಮೆಂಟ್ ಕಟ್ಟಿದ್ರೂ ಇವರ ಟಾರ್ಚರ್ ತಪ್ಪಲ್ಲ.

ಅಷ್ಟಕ್ಕೂ ಲೋನ್ ರಿಕವರಿ ಮಾಡಲು ಇವರು ಹಿಡಿಯುವ ಮಾರ್ಗ ಕೇಳಿದ್ರೆ ಶಾಕ್ ಆಗುತ್ತೆ. ಮೊದಲಿಗೆ ವಾಟ್ಸಪ್ ನಲ್ಲಿ ಲೋನ್ ಆ್ಯಪ್ ಲಿಂಕ್ ಕಳಿಸಿದ್ದ ವಂಚಕರು, ಲಿಂಕ್ ಓಪನ್ ಮಾಡಿ ಜಿ ಮೇಲ್ ಅಡ್ರೆಸ್, ಒಂದು ಸೆಲ್ಫಿ ಅಪ್ ಲೋಡ್ ಮಾಡಿದ್ರೆ ಮುಗೀತೂ. ವಾಟ್ಸಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಲೋನ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದ ವ್ಯಕ್ತಿಗೆ ಕೊಟ್ಟಿದ್ದಾರೆ ಇನ್ನಿಲ್ಲದ ಟಾರ್ಚರ್. ವ್ಯಕ್ತಿಯ ಅಕೌಂಟ್ ಗೆ 3,800 ರೂಪಾಯಿ ಜಮೆಯಾಗಿತ್ತು. ಬಳಿಕ ಹಣ ಕಟ್ಟುವಂತೆ ಅಪರಿಚಿತ ನಂಬರ್ ನಿಂದ ಹಂತಕರು‌ ಕರೆ ಮಾಡಿದ್ದರು. 3,800 ರೂ ಕಟ್ಟಿದ ಮೇಲೂ ಮತ್ತೆ ಮತ್ತೆ ಹಣ ಕಟ್ಟುವಂತೆ ಕರೆ ಮಾಡಿ ಮೆಸೇಜ್ ಮಾಡಿ ಟಾರ್ಚರ್ ಕೊಟ್ಟಿದ್ದಾರೆ ವಂಚಕರು.

ಅನಂತರ ಕಾಲ್ ರಿಸಿವ್ ಮಾಡ್ದೆ, ಮೆಸೇಜ್ ಗೂ ರಿಫ್ಲೈ ಮಾಡ್ದೆ ಅವೈಡ್ ಮಾಡಿದ್ದ ಲೋನ್ ಪಡೆದಿದ್ದ ವ್ಯಕ್ತಿ.

ಅತನ ಜಿ- ಮೇಲ್ ಅಕೌಂಟ್ ಹ್ಯಾಕ್ ಮಾಡಿ ಆತನ ಕಾಂಟ್ಯಾಕ್ಟ್ ನಂಬರ್‌ಗಳನ್ನ ಖದೀಮರು ಕದ್ದಿದ್ದರು. ಆತನ ಫ್ರೆಂಡ್ಸ್ ನಂಬರ್‌ಗಳಿಗೆ ಮೊದಲಿಗೆ ಲೋನ್ ಪಡೆದ ವ್ಯಕ್ತಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದರು ವಂಚಕರು.

ಸ್ನೇಹಿತೆಯರಿಗೆ, ಸಂಬಂಧಿಗಳಿಗೆ ಇತನ ಅಶ್ಲೀಲವಾದ ಫೋಟೋ ಕಳಿಸಿ ಇತನಿಂದ ಇನ್ನು ಹಣ ಕಟ್ಟುವಂತೆ ಟಾರ್ಚರ್ ಮಾಡಿ ಮಾನಸಿವಾಗಿ ಹಿಂಸಿಸಿದ್ದರು ಈ ಖತರ್ನಾಕ್ ಆರೋಪಿಗಳು.

ಇದಕ್ಕೆ ಹೆದರಿ ಒಟ್ಟು 7 ಸಾವಿರ ಹಣವನ್ನ ಕಟ್ಟಿದ್ರೂ ನಿಲ್ಲಲ್ವಂತೆ ವಂಚಕರ ಟಾರ್ಚರ್.ಮತ್ತೆ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಅಶ್ಲೀಲವಾದ ಫೋಟೋ ಕಳುಹಿಸಿ ಮಾನಹಾನಿ ಮಾಡಿ ಹಣ ಕಟ್ಟುವಂತೆ ಸಾಕಷ್ಟು ಬೇರೆ ಬೇರೆ ನಂಬರ್ ನಿಂದ ಕರೆ ಮಾಡಿ ಟಾರ್ಚರ್ ಕೊಡ್ತಾರೆಂದು ವ್ಯಕ್ತಿ ಆರೋಪ‌ಮಾಡಿದ್ದಾರೆ.

ರಾಜ್ಯದಲ್ಲಿ ಈ ರೀತಿಯ ನಕಲಿ ಲೋನ್ ಆ್ಯಪ್‌ಗಳ ಹಾವಳಿ ಹೆಚ್ಚಾಗಿದ್ದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳು ದಾಖಲಾಗ್ತಿದ್ರೂ ಪ್ರಯೋಜನ ಆಗ್ತಿಲ್ಲ. ಯಾಕಂದ್ರೆ ಇವ್ರೆಲ್ಲ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಅಕ್ಟೀವ್ ಆಗಿ ಅಲ್ಲಿಂದ ಕರೆ ಮಾಡಿ ಟಾರ್ಚರ್ ಕೊಡ್ತಿದ್ದಾರೆ‌. ಇದ್ರಿಂದ ಇವ್ರನ್ನ ಪತ್ತೆ ಹಚ್ಚೋ ಕೆಲಸ ಪೊಲೀಸ್ರಿಗೂ ತಲೆ ನೋವಾಗಿದೆ.

Edited By :
PublicNext

PublicNext

29/05/2022 09:16 pm

Cinque Terre

49.21 K

Cinque Terre

0