ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೊಬ್ಬ ಬಂಗಾಳಿ ಮಾಡೆಲ್ ಮಂಜುಷಾ ಆತ್ಮಹತ್ಯೆ

ಕೋಲ್ಕತಾ: ತಾರಾಲೋಕದಲ್ಲಿ ಇರುವ ಮಂದಿಯ ನಿಗೂಢ ಸಾವು ಹಾಗೂ ಆತ್ಮಹತ್ಯೆಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಬಂಗಾಳಿ ರೂಪದರ್ಶಿ ಬಿದಿಶಾ ಮಂಜುದಾರ್ ಅವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಿದಿಶಾ ಶವ ಸಂಸ್ಕಾರ ಇನ್ನೂ ಆಗಿಲ್ಲ. ಆಗಲೇ ಮತ್ತೊಬ್ಬ ರೂಪದರ್ಶಿ ಮಂಜುಷಾ ನಿಯೋಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಮಾಡೆಲಿಂಗ್ ಲೋಕದಲ್ಲಿ ಆಘಾತವನ್ನುಂಟು ಮಾಡಿದೆ.

ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇಂದು ಅವರ ಶವವು ಪಟುಲಿ ಪ್ರದೇಶದಲ್ಲಿರುವ ನಿವಾಸದ ಮಂಜುಷಾ ಕೊಠಡಿಯಲ್ಲಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮ ಮಗಳ ಸಾವಿಗೆ ಬಿದಿಶಾ ಡಿ ಮಂಜುನಾಥ್ ಅವರ ಸಾವೇ ಕಾರಣ ಎಂದು ಮಂಜುಷಾ ಪೋಷಕರು ಆರೋಪಿಸಿದ್ದಾರೆ. ಇದ್ದರೆ ಅವಳಂತೆ ಇರಬೇಕು ಎನ್ನುತ್ತಿದ್ದ ಮಂಜುಷಾ ಹಾಗೂ ಬಿದಿಶಾ ಇಬ್ಬರೂ ಜೀವದ ಗೆಳತಿಯರಾಗಿದ್ದರು. ಬಿದಿಷಾ ಸಾವಿನ ಸುದ್ದಿ ಕೇಳಿ ಮಂಜುಷಾ ಮಾನಸಿಕ ಖಿನ್ನತೆಗೆ ಜಾರಿದ್ದಳು ಎಂದು ಮಂಜುಷಾ ತಾಯಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

27/05/2022 05:17 pm

Cinque Terre

30.23 K

Cinque Terre

0

ಸಂಬಂಧಿತ ಸುದ್ದಿ