ಬೆಂಗಳೂರು: ರೋಹಿತ್ ಚಕ್ರತೀರ್ತ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕ ಸುದ್ದಿ ಮತ್ತು ಚರ್ಚೆಯಾಗ್ತಿತೋ ಹೆಸ್ರು. ಪಠ್ಯಪುಸ್ತಕ ರಚನೆ ಪ್ರಾಧಿಕಾರದ ಅಧ್ಯಕ್ಷರಾಗಿರೋ ರೋಹಿತ್ ಚಕ್ರತೀರ್ಥ ಮೇಲೆ ನಾಡಗೀತೆಗೆ ಅವಮಾನ ಮಾಡಿರೋ ಒಂದು ಪೋಸ್ಟ್ ಸದ್ಯ ವೈರಲ್ ಆಗಿದ್ದು ಆ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ.
ಸದ್ಯ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ಹಾಗೂ ಕೆಲ ಕನ್ನಡ ಪರ ಹೋರಾಟಗಾರರು ರೋಹಿತ್ ಚಕ್ರತೀರ್ಥ ಕುರಿತು ಅಪಸ್ವರ ಎತ್ತಿದ್ದಾರೆ. ಇನ್ನು ಇಂದು ಮಾಜಿ ವಕೀಲರ ಪರಿಷತ್ ನ ಅಧ್ಯಕ್ಷ ಎಪಿ ರಂಗನಾಥ್ ಹಾಗೂ ಹಿರಿಯ ವಕೀಲ ಹರಿರಾಮ್ ಸೂರ್ಯಮುಖಂದರಾಜ್ ಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸಿದ್ದಾರೆ.ರೋಹಿತ್ ಜೊತೆಗೆ ಕುವೆಂಪು ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಲಕ್ಷ್ಮಣ್ ಆಕಾಶ್ ಮೇಲೂ ಕ್ರಮ ಜರುಗಿಸುವಂತೆ ಕಮಿಷನರ್ ಪ್ರತಾಪ್ ರೆಡ್ಡಿಗೆ ದೂರು ದಾಖಲಿಸಿದ್ದಾರೆ.
PublicNext
26/05/2022 10:20 pm