ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಬಿಬಿಎಸ್ ಸೀಟ್‌ಗಾಗಿ ಲಕ್ಷ ಲಕ್ಷ ಹಣ ಕೊಟ್ಟ ವೈದ್ಯನನ್ನು ಹನಿಟ್ರ್ಯಾಪ್ ಹಳ್ಳಕ್ಕೆ ದೂಡಿದ ವಂಚಕರು

ಬೆಂಗಳೂರು: ರಾಜಧಾನಿಯ ಖಾಸಗಿ ಕಾಲೇಜಿನಲ್ಲಿ ತಮ್ಮ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಆಳಂದ ಮೂಲದ ವೈದ್ಯನಿಗೆ ನಂಬಿಸಿ 66 ಲಕ್ಷ ಪಡೆದಿದ್ರು. ಆದ್ರೆ ಸೀಟೂ ಕೊಡಿಸದೆ ಹಣವನ್ನೂ ವಾಪಸ್ ನೀಡದ ಆರೋಪಿಗಳು ವಂಚಿಸಿದ್ರು. ಇತ್ತ ಕೊಟ್ಟ ಹಣಕ್ಕೆ ವೈದ್ಯರು ದುಂಬಾಲು ಬಿದ್ದಾಗ ಹಣ ವಾಪಸ್ ನೀಡದೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಮತ್ತೆ 50 ಲಕ್ಷ ಪಡೆದ ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಕಲಬುರಗಿಯ ಆಳಂದದಲ್ಲಿ ವೈದ್ಯರು ನೀಡಿದ ದೂರಿನ ಮೇರೆಗೆ ನಾಗರಾಜ್ ಹಾಗೂ ಮಧು ಸೇರಿದಂತೆ‌ ಮೂವರನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ. ಕಲಬುರಗಿಯಲ್ಲಿ ಕ್ಲಿನಿಕ್‌ ಇಟ್ಟುಕೊಂಡಿರುವ ವೈದ್ಯರೊಬ್ರು ತಮ್ಮ ಮಗನಿಗೆ ರಾಜಧಾನಿಯ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟಿ ಪಡೆಯಲು ಓಡಾಟ ನಡೆಸಿದ್ರು. ಈ ವೇಳೆ ಎಂಟು ವರ್ಷಗಳಿಂದ‌ ಪರಿಚಿತನಾಗಿದ್ದ ಆರೋಪಿ ನಾಗರಾಜ್ ತಮ್ಮ ಮಗನಿಗೆ ಸೀಟು ಕೊಡಿಸುತ್ತೇನೆ‌ ಎಂದು ನಂಬಿಸಿದ್ದ. ಪರಿಚಯಸ್ಥರಾಗಿದ್ದರಿಂದ‌ ನಂಬಿಕೆ ಮೇರೆಗೆ ಕಳೆದ ವರ್ಷ ಹಂತ ಹಂತವಾಗಿ 66 ಲಕ್ಷವನ್ನು ವೈದ್ಯರು ಕೊಟ್ಟಿದ್ದರು. ಬಳಿಕ ಎಂಬಿಬಿಎಸ್ ಸೀಟು ಕೊಡಿಸದೆ ಹಣ ನೀಡದೆ ನಾಗರಾಜ್ ಆಟ ಆಡಿಸಿದ್ದ. ಕೆಲ ತಿಂಗಳ ಬಳಿಕ ಹಣ ನೀಡುವುದಾಗಿ ನಗರಕ್ಕೆ ಶಂಕರ್ ನನ್ನು ಆರೋಪಿ ಕರೆಸಿಕೊಂಡಿದ್ರು.

ಗಾಂಧಿನಗರದ ಲಾಡ್ಜ್ನಲ್ಲಿ ಪ್ರತ್ಯೇಕ ರೂಮ್ ಬುಕ್ ಮಾಡಿದ್ದ ವೈದ್ಯರು ಮಧ್ಯರಾತ್ರಿ ಆರೋಪಿಯ ಅಣತಿಯಂತೆ ಇಬ್ಬರು ಯುವತಿಯರು ಶಂಕರ್ ಉಳಿದುಕೊಂಡಿದ್ದ ರೂಮಿಗೆ‌ ನುಗ್ಗಿದ್ದರು. ಇದಾದ ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್‌ಗೆ ಎಂಟ್ರಿ ಕೊಟ್ಟು ಪೊಲೀಸ್ ರೇಡ್ ಅಂತ ಸೀನ್ ಕ್ರಿಯೇಟ್ ಮಾಡಿದ್ರು. ‌ಪಕ್ಕದ‌ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್ ಹುಡುಗಿಯರು ಇರುವ ಶಂಕರ್ ಪೋಟೊವನ್ನು‌ ಕ್ಲಿಕಿಸಿಕೊಂಡಿದ್ದ. ಬಳಿಕ ವೈದ್ಯರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ಪಡೆದು ರೈಡ್ ಮಾಡಿರುವ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳದಿರಲು 50 ಲಕ್ಷಕ್ಕೆ ಡೀಲ್ ಮಾಡಿಕೊಂಡಿರುವುದಾಗಿ ಹೇಳಿ ಹಣ ನೀಡುವಂತೆ ಆರೋಪಿಯು ವೈದ್ಯರಿಗೆ ತಾಕೀತು ಮಾಡಿದ್ದಾನೆ‌. ಹಣ ನೀಡದೆ ಹೋದರೆ ನಿನ್ನನ್ನ ಬಂಧಿಸುತ್ತಾರೆ.ಆಗ ನಿನ್ನ ಮಾನ-ಮಾರ್ಯಾದೆ ಹೋಗಲಿದೆ ಎಂದು ಬೆದರಿಸಿದ್ದಾರೆ. ಮರ್ಯಾದೆಗೆ ಅಂಜಿದ‌ ಶಂಕರ್ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡಿದ್ರು. ಕಲಬುರಗಿಗೆ ತೆರಳಿ ಮನೆ ಪತ್ರದ ಆಧಾರದ ಮೇಲೆ ಖಾಸಗಿ ಬ್ಯಾಂಕ್‌ನಲ್ಲಿ 50 ಲಕ್ಷ ಹಣ ಸಾಲ ಪಡೆದು ಆರೋಪಿಗಳ ಕೈಗೆ ಇಟ್ಟಿದ್ದಾರೆ.

ಇಷ್ಟೇ ಅಲ್ಲದೆ 50 ಲಕ್ಷ ಪಡೆದು ಆರೋಪಿಗಳು‌‌ ಕೆಲ ದಿನಗಳು ಸುಮ್ಮನಿದ್ದು ಬಳಿಕ‌ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್‌ ಮಾಡಿಸಲು 20 ಲಕ್ಷ ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ‌ ಮನೆಗೆ ಬಂದು ಮಾನ ಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಲಾದ ವೈದ್ಯರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು‌ ಪ್ರಕರಣವನ್ನ ಸಿಸಿಬಿಗೆ ಹಸ್ತಾಂತರಿಸಿದ್ದರು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದೆ.

Edited By : Nagaraj Tulugeri
PublicNext

PublicNext

26/05/2022 03:44 pm

Cinque Terre

32.87 K

Cinque Terre

2

ಸಂಬಂಧಿತ ಸುದ್ದಿ