ವಿಜಯನಗರ : ಸ್ನೇಹಿತ ಎಂದು ನಂಬಿದ್ದವನ ಹೆಂಡತಿಯನ್ನೇ ವ್ಯಕ್ತಿಯೊಬ್ಬ ಪ್ರೀತಿಸಿ ಆತನ ಪತ್ನಿ ಜೊತೆ ಸೇರಿ ಆಪ್ತಮಿತ್ರನನ್ನೆ ಕೊಲೆಗೈಯಲು ಯತ್ನಿಸಿದಾಗ ಅದೃಷ್ಟವಶಾತ್ ಆತ ಬದುಕುಳಿದ ಘಟನೆ ಕೊಟ್ಟೂರ ತಾಲೂಕಿನ ಚಪ್ಪರದಹಳ್ಳಿಯಲ್ಲಿ ನಡೆದಿದೆ.
ಹೌದು ! ಸಿದ್ದೇಶ್ ಎಂಬಾತ ಕಳೆದ 15 ವರ್ಷಗಳ ಹಿಂದೆ ಮಾವನ ಮಗಳು ಕಲ್ಪನಾ ಮದುವೆಯಾಗಿದ್ದ, ಅಡುಗೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳ ಜೊತೆ ಚೆನ್ನಾಗಿಯೆ ಇದ್ದ ಕುಟುಂಬಕ್ಕೆ ಪ್ರವೇಶಿಸಿದ ಸ್ನೇಹಿತ ಕೊಟ್ರೇಶ್ ಸಿದ್ದೇಶ್ ಪತ್ನಿ ಕಲ್ಪನಾ ಮೇಲೆ ಕಣ್ಣು ಹಾಕಿ ಪ್ರೇಮಿಸಿ ಇಬ್ಬರು ನಡುವೆ ಲವ್ವಿ ಡವ್ವಿ ಆರಂಭವಾಗಿತ್ತು.
ಕಲ್ಪನಾ ಪತಿ ಸಿದ್ದೇಶ್ ಕಷ್ಟದಲ್ಲಿರುವ ಸ್ನೆಹಿತನಿಗೆ ತನ್ನ ಮನೆ ಬಾಡಿಗೆ ಕೊಟ್ಟಾಗಲೇ ಕೊಟ್ರೇಶ್ ಸಿದ್ದೇಶ್'ನ ಪತ್ನಿ ಮೇಲೆ ಕಣ್ಣು ಹಾಕಿ ಇಬ್ಬರು ಪ್ರಣಯ ಪ್ರಸಂಗ ಸಹ ನಡೆದಿದೆ.
ಈ ಅಕ್ರಮ ಸಂಬಂಧ ತಿಳಿದು ಸಿದ್ದೇಶ್ ಹೆಂಡತಿಗೆ ತಿಳಿ ಹೇಳುವಾಗ ಗಲಾಟೆ ನಡೆದು ಪತ್ನಿಯನ್ನು ಸಿದ್ದೇಶ್ ತವರು ಮನೆಗೆ ಕಳುಹಿಸಿದ್ದಾನೆ, ಇದರಿಂದ ಕೋಪಗೊಂಡ ಪತಿ ಕಲ್ಪನಾ ಆತನ ಸ್ನೇಹಿತ ಕೊಟ್ರೇಶ್'ನಿಗೆ ತನ್ನ ಗಂಡನನ್ನು ಮುಗಿಸಿ ಬಿಡುವಂತೆ ಹೇಳಿದ್ದಾಳೆ.
ಇಬ್ಬರೂ ಸೇರಿಕೊಂಡು ಸಿದ್ದೇಶ್ ಕೊಲೆಗೆ ಸ್ಕೇಚ್ ಹಾಕಿ ಸಿದ್ದೇಶ್ ಮೇಲೆ ದಾಳಿ ನಡೆಸಿ ತಲೆಗೆ ಬಲವಾಗಿ ಹೊಡೆದಿದ್ದು, ಅಲ್ಲಿಂದ ಪಾರಾದ ಸಿದ್ದೇಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಬಳಿಕ ಸಿದ್ದೇಶ್ ಪತಿ ಕಲ್ಪನಾ ಹಾಗೂ ಸ್ನೇಹಿತ ಕೊಟ್ರೇಶ್ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
PublicNext
18/05/2022 11:40 am