ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಯಾಣ : ಸಾಕಿದ ಕೋಳಿಗಳಿಗೆ ನೀರು ಕಾಳು ಹಾಕದ ಮಗಳನ್ನು ಕೊಂದ ತಂದೆ

ಹರಿಯಾಣ : ಮನೆಯಲ್ಲಿ ಸಾಕಿದ ಕೋಳಿಗಳಿಗೆ ನೀರು, ಕಾಳು ಏಕೆ ? ಹಾಕಲಿಲ್ಲ ಎಂಬ ಕಾರಣದಿಂದ ಹೆತ್ತ ಮಗಳನ್ನೇ ಪಾಪಿ ತಂದೆ ಹೊಡೆದು ಕೊಲೆ ಮಾಡಿದ್ದಾನೆ.

ಹರಿಯಾಣದ ಸೋನಿಪತ್​​​ನಲ್ಲಿ ಇಂತಹ ಅಘಾತಕಾರಿ ಘಟನೆ ನಡೆದಿದ್ದು, ಮನೆಯಲ್ಲಿ ಸಾಕಿದ್ದ ಕೋಳಿಗಳಿಗೆ ನೀರು, ಕಾಳು ಹಾಕಲಿಲ್ಲ ಎಂಬ ಕಾರಣಕ್ಕಾಗಿ ಮಗಳನ್ನೇ ಜನ್ಮ ಕೊಟ್ಟ ತಂದೆಯೆ ಮಗಳನ್ನು ಹೊಡೆದು ಕೊಲೆ ಮಾಡಿದ್ದಾನೆ.

ಮೇ.14 ರಂದು ಈ ಘಟನೆ ನಡೆದಿದ್ದು, ಹೆತ್ತ ತಂದೆ ಜಗ್ಗಣ್ಣ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದು ವಿಚಾರಣೆ ವೇಳೆ ತಂದೆ ಕೋಳಿಗಳಿಗೆ ನೀರು ಕಾಳು ಹಾಕದೆ ಇರುವ ಕಾರಣ ಮಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಕಟ್ಟಿಗೆಯಿಂದ ಅವಮಾನೀಯ ರೀತಿಯಲ್ಲಿ ಥಳಿಸಿದ್ದಾನೆ.

ಥಳಿತಕ್ಕೆ ಒಳಗಾದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ ಎಂಬ ವಿಚಾರ ಪೊಲೀಸರ ತನಿಖೆ ಬಳಿಕವೇ ತಿಳಿದು ಬಂದಿದೆ.

Edited By : Vijay Kumar
PublicNext

PublicNext

17/05/2022 05:11 pm

Cinque Terre

70.86 K

Cinque Terre

0

ಸಂಬಂಧಿತ ಸುದ್ದಿ