ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ತಾಯಿಯ ಒಂದು ಕೆಜಿ ಚಿನ್ನ ಕದ್ದು ಮೋಜು ಮಾಡಿದ ಪ್ರೇಮಿಗಳು ಅಂದರ್ !

ಬೆಂಗಳೂರು : ಪ್ರಿಯತಮನ ಬೆನ್ನಟ್ಟಿದ ಮಗಳೇ ಆತನಿಗಾಗಿ ತಾಯಿಯ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಯುವತಿ ಆಕೆಯ ಪ್ರಿಯತಮನನ್ನು ಬೆಂಗಳೂರು ನಗರದ ಅಮೃತಹಳ್ಳಿಯ ಪೊಲೀಸರು ಬಂಧಿಸಿದ್ದಾರೆ.

ಹೌದು ! ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರ ನೀಡಿದ ದೂರಿನ ಮೇರೆಗೆ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ದೀಪ್ತಿ ಹಾಗೂ ಮದನ್ ಎಂಬುವವರನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಜಕ್ಕೂರ ಲೇಔಟ್'ನಲ್ಲಿ ತಾಯಿ ಜೊತೆ ವಾಸವಾಗಿದ್ದ ಪುತ್ರಿ ದೀಪ್ತಿ ಪತಿಯಿಂದ ವಿಚ್ಛೇದನ ಪಡೆದು ತಾಯಿ ಮನೆ ಸೇರಿದ್ದಳು, ಬಳಿಕ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡ್ರೈವಿಂಗ್ ಸ್ಕೂಲ್ ಸೇರಿದ್ದಳು ಅಲ್ಲಿಯ ಪರಿಚಯ ಪ್ರೇಮಕ್ಕೆ ತಿರುಗಿ ಮದನ್'ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿ ಒಪ್ಪಿ ಸುತ್ತಾಟ ನಡೆಸಿದ್ದರು.

ದೀಪ್ತಿ ಪ್ರೀಯಕರನ ಅಣತಿಯಂತೆ ತಾಯಿ ರತ್ನಮ್ಮನ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಾಳೆ. ಕಳೆದ ಹಲವಾರು ದಿನಗಳಿಂದ ಹಂತ ಹಂತವಾಗಿ ಸುಮಾರು 1 ಕೆಜಿ ಚಿನ್ನ ಕಳ್ಳತನ ಮಾಡಿ ಪ್ರಿಯತಮನಿಗೆ ನೀಡಿದ್ದಾಳೆ.

ಟೈಲರ್ ಕೆಲಸ ಮಾಡುತ್ತಿದ್ದ ತಾಯಿ ರತ್ನಮ್ಮ ಒಡುವೆ ಧರಿಸಿಕೊಳ್ಳಲು ಬೀರು ತೆಗೆದು ಚಿನ್ನಾಭರಣ ಕಾಣದಾದಾಗ ಮಗಳನ್ನು ಪ್ರಶ್ನೆ ಮಾಡಿ ಗೊತ್ತಿಲ್ಲಾ ಎಂದಾಗ ಆಗಾಗ ಮನೆ ಕಡೆ ತಲೆ ಹಾಕುತ್ತಿದ್ದ ಮದನ್ ಹಾಗೂ ಪುತ್ರಿ ದೀಪ್ತಿ ವಿರುದ್ಧ ಪೊಲಿಸ್ ಠಾಣೆ ಮೇಟ್ಟಿಲೇರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿಯ ಪೋಲಿಸರು ಮದನ್ ಹಾಗೂ ದೀಪ್ತಿ ವಿಚಾರಣೆ ನಡೆಸಿದಾಗ ಚಿನ್ನಾಭರಣ ಕದ್ದು ಮಣಪ್ಪುರಂ ಗೋಲ್ಡ್'ನಲ್ಲಿ ಅಡವಿಟ್ಟು ಮೋಜು ಮಸ್ತಿ ಮಾಡಿದ ವಿಚಾರ ಬಯಲಾಗಿದೆ.

Edited By : Vijay Kumar
PublicNext

PublicNext

17/05/2022 11:10 am

Cinque Terre

33.64 K

Cinque Terre

2