ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ'ಗೆ ಸಿಬಿಐ ಶಾಕ್ !

ನವದೆಹಲಿ : ಇಂದು ಬೆಳಿಗ್ಗೆಯೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಸಿಬಿಐ ತಂಡ ಶಾಕ್ ನೀಡಿದೆ.

ಚಿದಂಬರಂ ಅವರ ಮಗ ಹಾಗೂ ಹಾಗೂ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದ ಮೇಲೆ ಸಿಬಿಐ ತಂಡ ದಾಳಿ ನಡೆಸಿವೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

ಚಿದಂಬರಂ ಪುತ್ರ ಮತ್ತು ಲೋಕಸಭಾ ಸಂಸದ ಕಾರ್ತಿ ಚಿದಂಬರಂ ಸಿಬಿಐ ಸ್ಕಾನರ್ ಅಡಿಯಲ್ಲಿದ್ದಾರೆ, ಸದ್ಯ ದೆಹಲಿ, ಮುಂಬೈ, ಚೈನೈ, ಸೇರಿದಂತೆ ದೇಶದ ಏಳು ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಕಳೆದ 2010-14ರ ಅವಧಿಯಲ್ಲಿ ವಿದೇಶಿ ಹಣ ಆರೋಪದ ಮೇಲೆ ಕೇಂದ್ರ ತನಿಖಾ ಕಾರ್ಯ ಸಂಸ್ಥೆಯು ಕಾರ್ತಿ ಚಿದಂಬರಂ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ ಎನ್ನಲಾಗುತ್ತಿದೆ.

Edited By : Vijay Kumar
PublicNext

PublicNext

17/05/2022 10:43 am

Cinque Terre

51.78 K

Cinque Terre

18