ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ನವರಂಗ್ ಸರ್ಕಲ್‌ನ ಡಾಕ್ಟರ್ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ನಟಿ ಚೇತನಾ ರಾಜ್ (21) ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ಕುಟುಂಬದ ಜೊತೆಗೆ ವಾಸವಾಗಿದ್ದು, ಫ್ಯಾಟ್ ಸರ್ಜರಿ ವೇಳೆ ಚೇತನಾ ಮೃತಪಟ್ಟಿರೋ ಶಂಕೆ ಈಗ ವ್ಯಕ್ತವಾಗಿದೆ.
ವೈದ್ಯರ ನಿರ್ಲಕ್ಷದಿಂದಲೇ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ನಟಿ ಚೇತನಾ ಪೋಷಕರು ಈಗ ಆರೋಪಿಸಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆ ಈ ಕಾರಣಕ್ಕೆ ನಮ್ಮ ಮಗಳು ಸತ್ತು ಹೋಗಿದ್ದಾಳೆ. ನಮ್ಮ ಒಪ್ಪಿಗೆಯನ್ನ ತೆಗೆದುಕೊಂಡಿಲ್ಲ. ಅಗತ್ಯ ಸಲಕರಣೆಗಳೂ ಇಲ್ಲದೇ ಸರ್ಜರಿಗೆ ವೈದ್ಯರು ಮುಂದಾಗಿದ್ದರು ಎಂದು ಪೋಷಕರು ದೂರಿದ್ದಾರೆ.
ಡಾಕ್ಟರ್ ಶೆಟ್ಟಿ ಆಸ್ಪತ್ರೆಗೆ ಚೇತನಾ ಚಿಕಿತ್ಸೆಗಾಗಿ ನಿನ್ನೆನೆ ದಾಖಲಾಗಿದ್ದರು. ಆದರೆ, ಸಂಜೆ ಹೊತ್ತಿಗ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಈ ಕಾರಣಕ್ಕೇನೆ ಶಂಕರಮಠದ ಕಾಡೇ ಆಸ್ಪತ್ರೆಗೂ ಚೇತನಾ ರಾಜ್ ರನ್ನ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಚೇತನಾ ಮೃತಪಟ್ಟಿದ್ದಾರೆಂಬ ಮಾಹಿತಿ ಈಗ ಲಭ್ಯವಾಗಿದೆ.
PublicNext
17/05/2022 08:18 am