ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಬಂಧಿತರ ಸಂಖ್ಯೆ ಹೆಚ್ಚಾಗುತ್ತಿದೆ. ನೇಮಕಾತಿ ಪರೀಕ್ಷೆಯ ಕಳ್ಳಾಟದಲ್ಲಿ ಭಾಗಿಯಾದ ಆರೋಪದಡಿ ಆರ್ ಎಸ್ ಐ ಹಾಗೂ ಓರ್ವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರ್ ಎಸ್ಐ ಬಸವರಾಜ್ ಗುರೋಲ್ ಹಾಗೂ ಆಭ್ಯರ್ಥಿ ನಾರಾಯಣ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚನ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಹಲವು ವರ್ಷಗಳಿಂದ ಡಿವೈಎಸ್ಪಿ ಶಾಂತಕುಮಾರ್ ಜೊತೆ ಬಸವರಾಜ್ ಕಾರ್ಯನಿರ್ವಹಿಸುತ್ತಿದ್ದ. ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್, ತಮ್ಮ ಸಂಪರ್ಕಕ್ಕೆ ಬರುವ ಆಭ್ಯರ್ಥಿಗಳ ಜೊತೆ ಡೀಲ್ ಕುದುರಿಸಿ ಹಣದ ವಹಿವಾಟು ನಡೆಸುತ್ತಿದ್ದ. ಜೊತೆಗೆ ಸ್ಟ್ರಾಂಗ್ ರೂಮ್ ನಲ್ಲಿರಬೇಕಾದ ಓಎಂಆರ್ ಶೀಟ್ ಇರುವ ಟ್ರಂಕ್ ನ ಒನ್ ಟೈಮ್ ಲಾಕ್ ಶಾಂತಕುಮಾರ್ ಮನೆಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.
ಈತನೊಂದಿಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ನಲ್ಲಿ 12ನೇ ಆರೋಪಿಯಾಗಿರುವ ನಾರಾಯಣ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
PublicNext
16/05/2022 08:44 pm