ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಬಸ್ ಚಾಲಕ ಉಗುಳಿದ್ದು ರಸ್ತೆ ಮೇಲಾ-ಪೊಲೀಸ್ ಮೇಲಾ ?

ಚೆನ್ನೈ: ಇಲ್ಲಿಯ ಸರ್ಕಾರಿ ಬಸ್ ಚಾಲಕನ ಟೈಮ್ ಚೆನ್ನಾಗಿಯೇ ಇರಲಿಲ್ಲ ಅನಿಸುತ್ತದೆ. ರಸ್ತೆ ಮೇಲೆ ಉಗುಳಿದಕ್ಕೇನೆ ಏಟು ತಿಂದು ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ.ನಿಜಕ್ಕೂ ಇಲ್ಲಿ ಆಗಿದ್ದಾದರೂ ಏನೂ ಅಂತಿರೋ ? ಬನ್ನಿ, ಹೇಳ್ತಿವಿ.

ಬಸ್ ಚಾಲಕನ ಹೆಸರು ಜಯಚಂದ್ರನ್. ಈತ ಎಂದಿನಂತೆ ಬಸ್ ಚಲಾಯಿಸಿಕೊಂಡು ಬರ್ತಿದ್ದನು. ಆದರೆ, ಉಗಳಬೇಕು ಅನಿಸಿದ್ದೇ ತಡ. ರಸ್ತೆ ಮೇಲೆ ಉಗುಳಿ ಬಿಟ್ಟಿದ್ದಾನೆ.

ಇಷ್ಟೇ ನೋಡಿ, ಅಲ್ಲಿಯೇ ಇದ್ದ ಪೊಲೀಸ್ ಕಾನ್ಸ್ಟೇಬಲ್ ಲೂಯಿಸ್ ಡ್ರೈವರ್ ಜಯಚಂದ್ರನ್ ನನ್ನ ಸರಿಯಾಗಿಯೇ ತಳಿಸಿದ್ದಾರೆ. ಇದರಿಂದ ತುಟಿ ಕಿತ್ತು ಹೋಗಿದೆ. ಗಲ್ಲಕ್ಕೆ ಗಾಯವಾಗಿದೆ ಎಂದು ಡ್ರೈವರ್ ಚಯಚಂದ್ರನ್ ಹೇಳಿದ್ದಾನೆ.

ಆದರೆ, ಪೊಲೀಸ್ ಕಾನ್ಟ್ಸೇಬಲ್ ಲೂಯಿಸ್ ಹೇಳೋದೇ ಬೇರೆ. ಡ್ರೈವರ್ ಜಯಚಂದ್ರನ್ ರಸ್ತೆ ಮೇಲೆ ಉಗುಳಲಿಲ್ಲ. ನೇರವಾಗಿ ನನ್ನ ಮೇಲೆನ ಉಗುಳಿದ್ದಾನೆ. ಈತ ತಪ್ಪು ಮಾಡಿದ್ದಾನೆ ಅಂತಲೇ ಲೂಸ್ ದೂರಿದ್ದಾರೆ.

ಒಟ್ಟಾರೆ ಇವರ ಜಗಳವನ್ನ ಜನ ನೋಡಿದ್ದಾರೆ. ಪೊಲೀಸರನ್ನೂ ಪ್ರಶ್ನಿಸಿದ್ದಾರೆ. ಆಗ ಪೊಲೀಸರೇ ಜನರನ್ನ ಚದುರಿಸಿ ಕಳಿಸಿದ್ದಾರೆ. ಈ ಸಂಬಂಧ ದೂರು ಕೂಡ ದಾಖಲಾಗಿದೆ.

Edited By :
PublicNext

PublicNext

16/05/2022 09:26 am

Cinque Terre

76.33 K

Cinque Terre

5

ಸಂಬಂಧಿತ ಸುದ್ದಿ