ತುಮಕೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೆಳೆಯನ ಸಾವನ್ನು ಅರಗಿಸಿಕೊಳ್ಳಲಾಗದೇ ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ತುಮಕೂರಿ ಅರೆಹಳ್ಳಿಯಲ್ಲಿ ನಡೆದಿದೆ.
ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ಧನುಷ್ ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರೆ, ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೇ 11ರಂದು ಊರಿನ ಜಾತ್ರೆಗೆಂದು ನೆಲಮಂಗಲ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಧನುಷ್ ಮೃತಪಟ್ಟಿದ್ದ. ಇವರು ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದವರು, ಸಾವಿನ ಸುದ್ದಿಕೇಳಿ ಸುಷ್ಮಾ ಆಘಾತಗೊಂಡಿದ್ದಳು. ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು ಕೂಡ. ಆದರೆ ಅಂದಿನಿಂದ ಸುಷ್ಮಾ ಧುನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು.
ವಿಷ ಸೇವಿಸಿದ್ದ ಸುಷ್ಮಾಳನ್ನು ನಾಲ್ಕೈದು ಆಸ್ಪತ್ರೆಗಳಿಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿದೆ ಮೇ 14ರಂದು ಸಾವನ್ನಪ್ಪಿದ್ದಾಳೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
15/05/2022 10:45 pm