ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪನನ್ನೆ ಚಾಕುವಿನಿಂದ ಚುಚ್ಚಿ ಕೊಂದು ಓಡಿ ಹೋದ ಪಾಪಿ ಪುತ್ರ !

ಗದಗ: ಕ್ಷುಲಕ್ಕ ಕಾರಣಕ್ಕೆ ಅಪ್ಪನನ್ನೇ ಚಾಕುವಿನಿಂದ ಮಗ ಹತ್ಯೆ ಮಾಡಿದ ಘಟನೆ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.

ಭರಮಪ್ಪ ದೊಡ್ಡಮನಿ (55) ಮೃತಪಟ್ಟಿದ್ದು,38 ವರ್ಷದ ಮಗ ಸುರೇಶ್ ದೊಡ್ಡಮನಿ ಅಪ್ಪನನ್ನ ಕೊಂದು ಈಗ ಪರಾರಿ ಆಗಿದ್ದಾನೆ.

ಮನೆಯಲ್ಲಿ ವಿನಾಕಾರಣ ಅಪ್ಪನೊಟ್ಟಿಗೆ ಮಗ ಜಗಳವಾಡುತ್ತಿದ್ದನಂತೆ. ಆ ಜಗಳ ತಾರಕ್ಕೇರಿ ಅಪ್ಪನ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯನ್ನ ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟಿದ್ದಾರೆ.

Edited By :
PublicNext

PublicNext

15/05/2022 11:30 am

Cinque Terre

70.53 K

Cinque Terre

1