ಚಾಮರಾಜನಗರ: ಪಿಯುಸಿ ಪರೀಕ್ಷೆ ಬರೆಯಲು ಹೋಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯು ತಾಯಿಯ ಕಣ್ಮುಂದೆಯೇ ಪ್ರೇಮಿಯೊಂದಿಗೆ ಕಾರಿನಲ್ಲಿ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಈ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಮೇ 6ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಳ್ಳೇಗಾಲದ ಕಾಲೇಜ್‌ವೊಂದರಲ್ಲಿ ಅಪ್ರಾಪ್ತೆ, ಪಿಯುಸಿ ಪರೀಕ್ಷೆ ಬರೆಯಲು ಹೋಗಿದ್ದಳು. ಆಗ ಮಗಳಿಗಾಗಿ ತಾಯಿ, ಪರೀಕ್ಷಾ ಕೇಂದ್ರದ ಬಳಿಯೇ ಕಾದು ಕುಳಿತಿದ್ದರು. ಆದರೆ ಪರೀಕ್ಷೆ ಮುಗಿಸಿ ಬರುತ್ತಿದ್ದಂತೆ ಯುವತಿ ನೋಡ ನೋಡುತ್ತಿದ್ದಂತೆಯೇ ತಾಯಿ ಮುಂದೆಯೇ ಪ್ರಿಯಕರನ ಜೊತೆ ಕಾರಿನಲ್ಲಿ ಓಡಿ ಹೋಗಿದ್ದಾಳೆ. ತಕ್ಷಣದಲ್ಲಿ ಏನೊಂದೂ ತೋಚದ ತಾಯಿ, ಬಳಿಕ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.
PublicNext
10/05/2022 08:05 am