ಯಾದಗಿರಿ: ಜಿಲ್ಲೆಯ ಹುಣಸಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಬೈಕ್ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗೌಡೂರ ತಾಂಡದ ಬೈಕ್ ಕಳ್ಳ ತಿರುಪತಿಯನ್ನ ಇಂದು ಗೆದ್ದಲಮರಿ ಕ್ರಾಸ್ ಬಳಿ ಪೊಲೀಸರು ಅರೆಸ್ಟ್ ಮಾಡಿ ವಿವಿಧ ಕಂಪನಿಯ 14 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಬೈಕ್ ಕಳ್ಳನನ್ನ ವಿಚಾರಿಸಿದಾಗ ಯಾದಗಿರಿ, ಶಹಾಪುರ, ದೇವದುರ್ಗ, ಹುಣಸಗಿ, ಮಸ್ಕಿ, ಮುದಗಲ್, ಹಟ್ಟಿ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿದ್ದನ್ನು ಬಾಯ್ಬಿಟ್ಟಿದ್ದಾನೆ.
ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ,ಸುರಪುರ ಉಪ ವಿಭಾಗದ ಡಿವೈಎಸ್ಪಿ ದೇವರಾಜ ಮಾರ್ಗದರ್ಶನದಲ್ಲಿ ಸಿಪಿಐ ದೌಲತ್ ಎನ್. ಕೆ. ಅವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಪಿಎಸೈ ಚಿದಾನಂದ ಸೌದಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐನಾತಿ ಬೈಕ್ ಕಳ್ಳನನ್ನ ಖೆಡ್ಡಾಗೆ ಕೆಡವಿದ್ದಾರೆ.
PublicNext
09/05/2022 09:28 pm