ಭೋಪಾಲ್: ಕೋರ್ಟ್ ಆವರಣದಲ್ಲೇ ವಕೀಲರಿಬ್ಬರು ಮಹಿಳೆಯ ಮೇಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ನ್ಯಾಯಾಲಯದಲ್ಲಿ ನಡೆದಿದೆ.
ಈ ಘಟನೆಯು ಗುರುವಾರ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ವಕೀಲನನ್ನು ಭಗವಾನ್ ಸಿಂಗ್ (58) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು 23 ವರ್ಷದ ಭಾರತಿ ಪಟೇಲ್ ಎಂದು ಗುರುತಿಸಲಾಗಿದೆ. ಪತಿಯಿಂದ ವಿಚ್ಛೇದನ ಪಡೆದಿರುವ ಭಾರತಿ ಪಟೇಲ್ ಜೀವನಾಂಶಕ್ಕಾಗಿ ತನ್ನ ಪತಿಯ ವಿರುದ್ಧ ದಾವೆ ಹೂಡಿದ್ದಾಳೆ.
ಇದೇ ವಿಚಾರವಾಗಿ ಭಾರತಿ ಹಾಗೂ ಪತಿಯ ಪರ ವಕೀಲ ಭಗವಾನ್ ಸಿಂಗ್ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಹಲ್ಲೆ ಮಟ್ಟವನ್ನು ತಲುಪಿದೆ. ವೈರಲ್ ವಿಡಿಯೋದಲ್ಲಿ ವಕೀಲರು ಮಹಿಳೆಯ ಹಿಂದೆ ಓಡಿ ಹೋಗಿ ಹಿಡಿದು ಬೆನ್ನಿಗೆ ಗುದ್ದುವುದನ್ನು ಕಾಣಬಹುದು. ಭಗವಾನ್ ಸಿಂಗ್ ಮಹಿಳೆಯನ್ನು ಥಳಿಸುತ್ತಿದ್ದಾಗ ಯಾರೂ ಅವಳನ್ನು ರಕ್ಷಿಸಲು ಮುಂದೆ ಬರಲಿಲ್ಲ ಮತ್ತು ಮೂಕ ಪ್ರೇಕ್ಷಕರಾಗಿದ್ದರು.
PublicNext
07/05/2022 02:42 pm