ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆಯನ್ನ ಭ್ರಷ್ಟಾಚಾರ ನಿಗ್ರಹ ದಳ (ACB) ಭ್ರಷ್ಟ್ರಾಚಾರದ ಹಿನ್ನೆಲೆಯಲ್ಲಿ ಬಂಧಿಸಿದೆ.
ಎಲೆಕ್ಟ್ರಿಕ್ ಹಾಗೂ ಹಾರ್ಡವೇರ್ ಉದ್ಯಮಿಯೊಬ್ಬರಿಗೆ ಜಿಎಸ್‌ಟಿ ಪ್ರಮಾಣ ನೀಡಲು 3000 ಲಂಚ ಪಡೆಯುತ್ತಿದ್ದ ವೇಳೆ, ಸಹಾಯಕ ಆಯುಕ್ತೆ ಪ್ರಿಯಾಂಕಾ ಜಿ.ಸಿ. ಅನ್ನ ACB ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಇಂದಿರಾ ನಗರದ ಕಚೇರಿಯಲ್ಲಿಯೇ ಪ್ರಿಯಾಂಕಾ ಜಿ.ಸಿ.ಯನ್ನ ಬಂಧಿಸಲಾಗಿದ್ದು, ಮಂಜುನಾಥನರದ ಕಲ್ಕೆರೆ ನಿವಾಸಿಯೊಬ್ಬರು ಜಿಎಸ್‌ಟಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ದಾಖಲೆಯಲ್ಲಿ ಅಂಚೆ ಪೆಟ್ಟಿಗೆ ಸಂಖ್ಯೆ ತಪ್ಪಾಗಿಯೇ ನಮೂದಿಸಿದ್ದರು.
ಈ ಕಾರಣಕ್ಕೆ ಪ್ರಮಾಣ ಪತ್ರ ವಿತರಿಸಿರಲಿಲ್ಲ. ಆದರೆ, ತಪ್ಪು ಸರಿ ಮಾಡಿ, ಜಿಎಸ್‌ಟಿ ಪ್ರಮಾಣ ಪತ್ರ ನೀಡಲು 10 ಸಾವಿರ ರೂಪಾಯಿ ಕೇಳಿದ್ದರು. ಕೊನೆಗೆ ಚೌಕಾಸಿ ಮಾಡಿ 3000 ಸಾವಿರಕ್ಕೆ ತೆಗೆದುಕೊಳ್ಳಲು ರೆಡಿ ಆಗಿದ್ದರು ಸಹಾಯಕ ಆಯುಕ್ತೆ ಪ್ರಿಯಾಂಕಾ ಜಿ.ಸಿ. ಈ ಕುರಿತು ಅರ್ಜಿದಾರ ಎಸಿಬಿಗೆ ದೂರು ಕೊಟ್ಟಿದ್ದರು.
3000 ದುಡ್ಡು ಪಡೆಯೋವಾಗಲೇ ಎಸಿಬಿ ದಾಳಿ ಮಾಡಿದೆ, ಪ್ರಿಯಾಂಕಾ ಜಿ.ಸಿಯನ್ನ ಬಂಧಿಸಿದೆ.
PublicNext
07/05/2022 10:12 am