ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಾಯಿ ಮತ್ತು ಇಬ್ಬರು ಮಕ್ಕಳು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ.
ಹುಲಿಹೈದರ್ ಗ್ರಾಮದ ತಾಯಿ ಶೈಲಮ್ಮ (28) ಮಕ್ಕಳಾದ ಪವನ್ (2) ಹಾಗೂ ಸಾನ್ವಿ (3) ಮೃತ ದುರ್ದೈವಿಗಳು. ಮನೆ ಮುಂದೆ ಬಟ್ಟೆ ಒಣಗಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ. ಪರಿಣಾಮ ಇಬ್ಬರು ಮಕ್ಕಳು ಸೇರಿ ತಾಯಿಯೂ ಕೂಡ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಒಂದೇ ಮನೆಯಲ್ಲಿ ಮೂರು ಜೀವಗಳು ಬಲಿಯಾಗಿರೋದರಿಂದ ಇಡೀ ಹುಲಿಹೈದರ್ ಗ್ರಾಮ ಕಣ್ಣೀರು ಹಾಕುತ್ತಿದೆ. ಮಕ್ಕಳು, ಹೆಂಡತಿಯನ್ನು ಕಳೆದುಕೊಂಡ ಉಮೇಶ್ ರೋಧನಾ ಕೇಳಲಾಗುತ್ತಿಲ್ಲ. ಶೈಲಮ್ಮ ಉಮೇಶ್ ದಂಪತಿಗೆ ಮೂರು ಮಕ್ಕಳು. ಸಾನ್ವಿ, ಪವನ್ ಹಾಗೂ ಸೂರಯ್ಯ. ಇದರಲ್ಲಿ ಒಂದು ವರ್ಷದ ಮಗ ಸೂರಯ್ಯ ಬದುಕುಳಿದ್ದಾನೆ. ವಾಯರ್ ಹಿಡಿದುಕೊಂಡು ಶೈಲಮ್ಮ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಗ್ರಾಮಸ್ಥರು ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.
PublicNext
06/05/2022 06:52 pm