ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಆಕೆಯ ಪ್ರಿಯತಮನ​ ಗುಪ್ತಾಂಗ ಛಿದ್ರಗೊಳಿಸಿ ಕೊಂದ ಪತಿ!

ಹೈದರಾಬಾದ್​: ಪರ ಪುರುಷನ ಜೊತೆಗೆ ಏಕಾಂತದಲ್ಲಿ ಇದ್ದಾಗಲೇ ಸಿಕ್ಕಿ ಬಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆಗೈದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ನ ಉಪನಗರದ ಅಬ್ದುಲ್ಲಾಪುರ ವಲಯದ ಕೊಟ್ಟಗುಡೆಮ್ ಬಳಿ ಘಟನೆ ನಡೆದಿದೆ. ಯಶ್ವಂತ್ (22) ಮತ್ತು ಜ್ಯೋತಿ (30) ಕೊಲೆಯಾದ ಜೋಡಿ. ಇಬ್ಬರೂ ವಿವಾಹೇತರ ಸಂಬಂಧದ ಕಾರಣಕ್ಕೆ ದಾರುಣವಾಗಿ ಕೊಲೆಯಾಗಿದ್ದಾರೆ. ತಾಂತ್ರಿಕ ಪುರಾವೆಗಳ ನೆರವಿನಿಂದ ಪೊಲೀಸರು ಮೃತಳ ಪತಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣದ ಸತ್ಯ ಗೊತ್ತಾಗಿದೆ.

ವಾರಸಿಗೂಡಾದಲ್ಲಿ ಜ್ಯೋತಿ ಕುಟುಂಬ ವಾಸವಾಗಿತ್ತು. ಈಕೆಯ ಪತಿ ಸ್ಟೀಲ್​ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಇದೇ ಪ್ರದೇಶದಲ್ಲಿ ಯಡ್ಲ ಯಶವಂತ್​ ಎಂಬ ಯುವಕನ ಕುಟುಂಬವೂ ನೆಲೆಸಿದೆ. ಯಶವಂತ್ ಕ್ಯಾಬ್ ಚಾಲಕ. ಈತನ ತಂದೆ ತೆಂಗಿನಕಾಯಿ ಮಾರಾಟಗಾರ. ಯಶವಂತ್ ಆರಂಭದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕಾರು ಖರೀದಿಸಿ ಕ್ಯಾಬ್​ ನಡೆಸುತ್ತಿದ್ದ. ಈ ನಡುವೆ ಯಶವಂತ್​ ಮತ್ತು ಜ್ಯೋತಿಗೆ ಪರಿಚಯವಾಗಿದೆ. ಈ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿದೆ.

ಯಶವಂತ್ ಮತ್ತು ಜ್ಯೋತಿ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಕುರಿತಾಗಿ ಪತಿ ಹಿಂದೊಮ್ಮೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದನಂತೆ. ಆದರೂ ನಡವಳಿಕೆ ಬದಲಾಗಲಿಲ್ಲ. ಯಶವಂತ್ ಮತ್ತು ಜ್ಯೋತಿ ಭಾನುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ವಾರಸಿಗುಡದಿಂದ ತೆರಳುತ್ತಿರುವುದನ್ನು ಪತಿ ಗಮನಿಸಿ ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲ ದಾರಿ ನಡುವೆ ಮದ್ಯ ಖರೀದಿಸಿ, ದಾರಿಯುದ್ದಕ್ಕೂ ಕುಡಿಯುತ್ತಲೇ ಹಿಂಬಾಲಿಸಿದ್ದಾನೆ. ಹೀಗೆ ಸಾಗಿದಾಗ ಸುಮಾರು 30 ಕಿ.ಮೀ ದೂರದಲ್ಲಿರುವ ಅಬ್ದುಲ್ಲಾಪುರ್ಮೀಟ್ ವಲಯದ ಕೊಟ್ಟಗುಡ ಬಳಿಯ ನಿರ್ಜನ ಪ್ರದೇಶದ ಪೊದೆಯೊಳಗೆ ತನ್ನ ಪತ್ನಿ ಮತ್ತು ಪ್ರಿಯಕರ ಹೋಗುವುದನ್ನು ಕಂಡಿದ್ದಾನೆ. ಇದರಿಂದ ಕೋಪಗೊಂಡ ಆತ ಪಕ್ಕದಲ್ಲಿದ್ದ ಕಲ್ಲನ್ನೆತ್ತಿ ಜ್ಯೋತಿ ತಲೆ ಮೇಲೆ ಹಾಕಿದ್ದಾನೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರು. ಇಷ್ಟಕ್ಕೆ ಸುಮ್ಮನಾಗದ ಆತ ತಾನು ತಂದಿದ್ದ ಸ್ಕ್ರೂಡ್ರೈವರ್​ನಿಂದ ಯಶವಂತ್ ಹೃದಯಕ್ಕೆ ಚುಚ್ಚಿದ್ದಾನೆ. ಆತನೂ ಕುಸಿದು ಬಿದ್ದ. ಇಷ್ಟಕ್ಕೆ ನಿಲ್ಲಿಸಲಿಲ್ಲ. ಕೋಪದಿಂದ ಗುಪ್ತಾಂಗವನ್ನೂ ಛಿದ್ರಗೊಳಿಸಿದ್ದಾನೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಾತ್ರಿ ಮಾಡಿಕೊಂಡ ಮೇಲಷ್ಟೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Edited By : Vijay Kumar
PublicNext

PublicNext

05/05/2022 10:32 am

Cinque Terre

63.55 K

Cinque Terre

5

ಸಂಬಂಧಿತ ಸುದ್ದಿ