ಕಾರ್ಕಳ: ಫೈನಾನ್ಸ್ ಸಂಸ್ಥೆಯೊಂದರಿಂದ ಟಿ.ವಿ.ಯನ್ನು ಸಾಲದ ರೂಪದಲ್ಲಿ ತೆಗೆದು ಕಂತು ತುಂಬುವ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ತಾಯಿ ಮತ್ತು ಮಗನಿಗೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ.
ಕಸಬಾ ಗ್ರಾಮ ನಿವಾಸಿ ಇನಾಯತ್ ಸಂಬಂಧಿ ಅಲ್ತಾಫ್ ಅವರ ಪತಿ ಆಸ್ಮಾ ಅವರು ತನ್ನ ಹೆಸರಿನಲ್ಲಿ ಫೈನಾನ್ಸ್ ಸಂಸ್ಥೆಯೊಂದರಿಂದ ಟಿ.ವಿ. ತೆಗೆದುಕೊಡುವುದಾಗಿ ಹೇಳಿ, ಕಂತು ಕಟ್ಟುತ್ತಾ ಬರುವಂತೆ ಸೂಚಿಸಿದ್ದು, ಅದಕ್ಕೆ ಇನಾಯತ್ ಒಪ್ಪಿ ಟಿ.ವಿ.ತೆಗೆದುಕೊಂಡು ಮನೆಯಲ್ಲಿ ಇಟ್ಟಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ತಕರಾರು ಎದ್ದು ಮೇ 1 ರಂದು ಅಲ್ತಾಫ್, ಅದ್ವಾನ್, ಅತೀಫ್, ಅಜೀಮ್ ಮತ್ತು ಶಬೀರ ಅವರು ಕಾರ್ಕಳ ಕಸಬಾದ ಬಂಗ್ಲೆಗುಡ್ಡೆಯಲ್ಲಿರುವ ದೂರುದಾರರ ಅಂಗಳಕ್ಕೆ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶಗೈದು ಇನಾಯತ್ ಹಾಗೂ ಅವರ ತಾಯಿ ಬೀಬಿ ಭಾನು ಅವರಿಗೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದರು. ತಾಯಿ-ಮಗನನ್ನು ಸಂಬಂಧಿಕರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/05/2022 02:18 pm