ಹೈದರಾಬಾದ್: ಆಸ್ತಿಗಾಗಿ ಅಪ್ರಾಪ್ತೆ (17 ವರ್ಷದ ಬಾಲಕಿ) ಅಪ್ಪನನ್ನೇ ಕೊಲೆಗೈದ ಘಟನೆ ತೆಲಂಗಾಣದ ಮೆಹೆಬೂಬ್ಬಾದ್ನ ವೇಮುನೂರಿನಲ್ಲಿ ನಡೆದಿದೆ.
ಕೊಲೆಯಾದ ತಂದೆಯನ್ನು ವೆಂಕಣ್ಣ(46) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಕಳೆದ 10 ತಿಂಗಳ ಹಿಂದೆ ವೆಂಕಣ್ಣನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದಾದ ಬಳಿಕ ಏಕೈಕ ಪುತ್ರಿ ಗ್ರಾಮದ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದರ ಬಗ್ಗೆ ತಂದೆಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ದೊಡ್ಡವಳಾಗುವವರೆಗೂ ಕಾಯುವಂತೆ ಕಿವಿಮಾತು ಹೇಳಿದ್ದನು. ಆದರೆ ತಂದೆಯ ಮಾತು ಮಗಳು ಕೇಳಿರಲಿಲ್ಲ. ಅಷ್ಟೇ ಅಲ್ಲದೆ ಹಿರಿಯರ ಮಾತಿಗೂ ಬಾಲಕಿ ಬೆಲೆ ಕೊಟ್ಟಿರಲಿಲ್ಲ. ಹೀಗಾಗಿ ಯಾವುದೇ ಆಸ್ತಿಯನ್ನು ಪುತ್ರಿಗೆ ನೀಡಲು ವೆಂಕಣ್ಣಗೆ ಹಿರಿಯರು ತಿಳಿಸಿದ್ದರು. ಆದರೆ ತನಗೆ ಆಸ್ತಿ ನೀಡುವಂತೆ ಮಗಳು ವಾಗ್ವಾದಕ್ಕೆ ಇಳಿದು ತಂದೆಯ ಮೇಲೆ ಹಲ್ಲೆ ಮಾಡಿದ್ದಾಳೆ. ಪರಿಣಾಮ ವೆಂಕಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಗಳು ಹಾಗೂ ಗ್ರಾಮಸ್ಥರು ವೆಂಕಣ್ಣನ ಕೊಲೆ ವಿಷಯ ಗೌಪ್ಯವಾಗಿಟ್ಟಿದ್ದರು. ಆದರೆ ಕೆಲ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಗ್ರಾಮಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
29/04/2022 08:44 pm