ಪಟಿಯಾಲ: ಪಂಜಾಬ್‌ನ ಪಟಿಯಾಲಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾತಿ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋದಲ್ಲಿ ಕಟ್ಟಡದ ಟೆರೇಸ್ ಮೇಲಿಂದ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ್ದು ದೃಶ್ಯಗಳಲ್ಲಿ ಸೆರೆಯಾಗಿದೆ. ಘರ್ಷಣೆಯ ಸಂದರ್ಭದಲ್ಲಿ ಕೆಲವರು ಕತ್ತಿಗಳು, ದೊಣ್ಣೆಗಳು ಹಾಗೂ ಆಯುಧಗಳನ್ನು ಹಿಡಿದು ಬಂದಿದ್ದಾರೆ.
ಶಿವಸೇನೆ ನಡೆಸುತ್ತಿದ್ದ ಮೆರವಣಿಗೆ ವೇಳೆ ಬೇರೊಂದು ಗುಂಪು ದಾಳಿ ನಡೆಸಿದ ಕಾರಣ ಈ ಗಲಭೆ ಶುರುವಾಗಿದೆ. ಆದ್ರೆ ಮೆರವಣಿಗೆ ನಡೆಸಲು ಶಿವಸೇನೆಯವರು ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
29/04/2022 06:28 pm