ದಾವಣಗೆರೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಂದು ಹಾಕಿರುವ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಹಾಲಮ್ಮನ ತೋಪಿನ ಬಳಿ ನಡೆದಿದೆ.ದಾವಣಗೆರೆ ನಗರದ ನಿಟುವಳ್ಳಿಯ ಧನ್ಯಕುಮಾರ್ ಹತ್ಯೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಬಾಡಿ ಬಿಲ್ಡರ್ ಆಗಿದ್ದ ಧನ್ಯಕುಮಾರ್ ಕಟ್ಟುಮಸ್ತರಾಗಿದ್ದರು. ಮಾತ್ರವಲ್ಲ, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.
ಸ್ನೇಹಿತರೇ ಕರೆದುಕೊಂಡು ಹೋಗಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತೋಪಿನಲ್ಲಿ ರಕ್ತಸಿಕ್ತವಾಗಿ ಧನ್ಯಕುಮಾರ್ ಶವ ಪತ್ತೆಯಾಗಿದೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಚ್ಚಂಗಿದುರ್ಗಕ್ಕೆ ಧನ್ಯಕುಮಾರ್ ಅವರು ಬಂದಾಗ ಅಟ್ಯಾಕ್ ಮಾಡಲಾಗಿದೆಯೋ ಅಥವಾ ಸ್ನೇಹಿತರ ಜೊತೆಗೆ ಬಂದಾಗ ಈ ಘಟನೆ ನಡೆದಿದೆಯೋ ಎಂಬ ಕುರಿತಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
PublicNext
28/04/2022 10:37 am