ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ ಮಾಜಿ ಮೇಯರ್ ವಿಡಿಯೋ ವೈರಲ್...!

ದಾವಣಗೆರೆ: ಲಾಂಗ್ ಹಿಡಿದು ಮಾಜಿ ಮೇಯರ್ ಅಜಯ್ ಕುಮಾರ್ ಡ್ಯಾನ್ಸ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಏಪ್ರಿಲ್ 3 ರಂದು ನಡೆದ ಗ್ರಾಮ ದೇವತೆಯ ಜಾತ್ರಾ ಮಹೋತ್ಸವದಲ್ಲಿ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ಇದಕ್ಕೂ ಮುನ್ನ ಲಾಂಗ್ ಹಿಡಿದು ಸಾರ್ವಜನಿಕವಾಗಿ ತೋರಿಸಿರುವ ವರ್ತನೆಗೆ ವಿರೋಧವೂ ವ್ಯಕ್ತವಾಗಿದೆ.

ಜನರು ನೃತ್ಯ ಮಾಡುವಂತೆ ಅಜಯ್ ಕುಮಾರ್ ಅವರಿಗೆ ಡ್ಯಾನ್ಸ್ ಮಾಡವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ಜಬರ್ದಸ್ತಾಗಿಯೇ ಸ್ಟೆಪ್ ಹಾಕಿದ್ದಾರೆ. ಜನರೂ ಸಹ ಮಾಜಿ ಮೇಯರ್ ಅವರ ಜೊತೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಟ್ರ್ಯಾಕ್ಟರ್ ಮೇಲೆ ನಿಂತು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

Edited By : Nagesh Gaonkar
PublicNext

PublicNext

26/04/2022 10:30 pm

Cinque Terre

92.03 K

Cinque Terre

5