ಕರಾಚಿ: ಪಾಕಿಸ್ತಾನದ ಕರಾಚಿಯ ವಿಶ್ವವಿದ್ಯಾಲಯದಲ್ಲಿ ಬುರ್ಖಾಧಾರಿ ಮಹಿಳೆಯಿಂದ ಆತ್ಮಾಹುತಿ ದಾಳಿ ನಡೆದಿದೆ. ಇದರ ಪರಿಣಾಮ ಚೀನಾದ ಮೂವರು ಪ್ರಜೆಗಳು ಸೇರಿ ಒಟ್ಟು ನಾಲ್ಕು ಜನ ಮೃತಪಟ್ಟಿದ್ದಾರೆ.
ಮೃತಪಟ್ಟ ದುರ್ದೈವಿಗಳಲ್ಲಿ ಇಬ್ಬರು ಮಹಿಳಾ ಪ್ರೊಫೆಸರ್ ಎಂದು ತಿಳಿದು ಬಂದಿದೆ. ಬುರ್ಖಾಧರಿಸಿ ಬಂದ ಮಹಿಳೆ ತನನ್ನೇ ತಾನು ಸ್ಪೋಟಿಸಿಕೊಂಡಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತಿದೆ. ಕ್ಲಾಸ್ ಮುಗಿಸಿಕೊಂಡು ಚೈನೀಸ್ ವಿದ್ಯಾರ್ಥಿನಿಯರು ಹಾಗೂ ಲೆಕ್ಚರರ್ಸ್ ವಾಹನದ ಮೂಲಕ ಹೊರಗೆ ಬರುತ್ತಿದ್ದರು.
ಈ ಒಂದು ವಾಹನವನ್ನ ಗುರಿಯಾಗಿಸಿಕೊಂಡೇ ದಾಳಿ ಮಾಡಲಾಗಿದೆ. ಆದರೆ, ಚೀನಿಯರ ಮೇಲೆ ದಾಳಿ ಇದೇ ಮೊದಲೇನೂ ಅಲ್ಲ. ಕಳೆದ ಜುಲೈ ತಿಂಗಳಲ್ಲೂಇಬ್ಬರು ನಾಗರಿಕರನ್ನ ಅಪರಿಚಿತರು ಗುಂಡಿಕ್ಕಿ ಕೊಂದು ಹಾಕಿದ್ದಾರೆ.
PublicNext
26/04/2022 10:28 pm