ಪಾಟ್ನಾ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಬಿಹಾರದ ಲಲಿತ್ಪುರ ಜಿಲ್ಲೆಯ ಮಸೌರಾ ಕಲಾನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಲಲಿತ್ಪುರದಿಂದ ಧೋರಿ ಸಾಗರ್ಗೆ ಬಸ್ ತೆರಳುತ್ತಿದ್ದ ವೇಳೆ ಬೈಕ್ ಸವಾರನೋರ್ವ ಓವರ್ಟೆಕ್ ಮಾಡಲು ಮುಂದಾಗಿದ್ದ. ಈ ವೇಳೆ ಆತನ ರಕ್ಷಣೆ ಮಾಡಲು ಚಾಲಕ ಬ್ರೇಕ್ ಹಾಕಿದ್ದು, ಬಸ್ ಪಲ್ಟಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
PublicNext
26/04/2022 10:15 pm