ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಕಳ್ಳರು ಎಟಿಎಂ ದೋಚಲು ಜೆಸಿಬಿಯನ್ನೇ ಬಳಕೆ ಮಾಡಿದ್ದಾರೆ. ಕಳ್ಳರ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಎಟಿಎಂ ಹಣ ದೋಚಲು ಮುಂದಾದ ಕಳ್ಳರು ಜೆಸಿಬಿಯಿಂದ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಯಂತ್ರವನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಉಂಟಾದ ಜೋರಾದ ಸದ್ದಿನಿಂದ ಸುತ್ತಲಿನ ಗ್ರಾಮಸ್ಥರು ಎಚ್ಚರಗೊಂಡು ಕಿರುಚಾಡಿದಾಗ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಕಾಲ್ಕಿತ್ತರು.
ಗ್ರಾಮಸ್ಥರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಎಟಿಎಂ ದೋಚುತ್ತಿರುವ ಕೃತ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
PublicNext
24/04/2022 06:16 pm