ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಅಧಿಕಾರಿಯ ಎದೆಗೆ ಒದ್ದ ಯುವಕ.!

ಹೈದರಾಬಾದ್‌: ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ನಾಲ್ವರು ಯುವಕರು ಸೇರಿಕೊಂಡು ಅಸಿಸ್ಟೆಂಟ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ರಮುಖ ಆರೋಪಿ ವಿಶಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹಳೇ ಹೈದರಾಬಾದ್​ನ ವಿವಿಧ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ವಿದ್ಯುತ್ ಬಿಲ್​ ವಸೂಲಿ ಕಾರ್ಯದಲ್ಲಿ ಕಾರ್ವಾನ್ ವಿಭಾಗ ಕಚೇರಿಯ ಸಹಾಯಕ ಎಂಜಿನಿಯರ್​​ ವಿಜಯ್ ಕುಮಾರ್​​ ಭಾಗಿಯಾಗಿದ್ದರು. ವಾಲ್ಮೀಕಿನಗರದ ಮನೆವೊಂದರಲ್ಲಿ ಕಳೆದ ಎರಡು ವರ್ಷದಿಂದ 17,714 ರೂ. ಬಿಲ್ ಪಾವತಿ ಮಾಡಿರಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಯುವಕ ವಿಶಾಲ್ ತನ್ನ ಸ್ನೇಹಿತರೊಂದಿಗೆ ವಿದ್ಯುತ್​​ ಕಚೇರಿಗೆ ಹೋಗಿದ್ದು, ಅಲ್ಲಿಸಹಾಯಕ ಎಂಜಿನಿಯರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತದ ನಂತರ ಹಲ್ಲೆ ನಡೆಸಿ ಎದೆಗೆ ಒದ್ದಿದ್ದಾನೆ.

Edited By : Vijay Kumar
PublicNext

PublicNext

20/04/2022 08:46 pm

Cinque Terre

54.45 K

Cinque Terre

5