ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್-2 ಸಿನಿಮಾ ನೋಡುವಾಗ ಯುವಕನ ಮೇಲೆ ಶೂಟೌಟ್

ಹಾವೇರಿ: ಕೆಜಿಎಫ್-2 ಸಿನಿಮಾ ನೋಡುವಾಗ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ದುಷ್ಕರ್ಮಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿದ್ದಾನೆ‌. ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಮಂಗಳವಾರ ರಾತ್ರಿ 10-30ರ ಸುಮಾರಿಗೆ ಈ ಘಟನೆ ನಡೆದಿದೆ. ವಸಂತ್‌ಕುಮಾರ್ ಸಣ್ಣಕಲ್ಲಪ್ಪ ಶಿವಪುರ ಎಂಬಾತನ ಮೇಲೆ ಫೈರಿಂಗ್ ಆಗಿದೆ. ಹಿಂದೆ ಕುಳಿತಿದ್ದ ದುಷ್ಕರ್ಮಿ ಮುಂದಿನ‌ ಸೀಟ್ ಮೇಲೆ ಕಾಲಿಟ್ಟಿದ್ದಾನೆ. ಹೀಗಾಗಿ ಕಾಲು ತೆಗೆಯುವಂತೆ ವಸಂತ್ ಹೇಳಿದ್ದಾನೆ. ಇದೇ ಕಾರಣಕ್ಕೆ ಸಣ್ಣ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಆಗ ಹತ್ತು ನಿಮಿಷ ಥಿಯೇಟರ್‌ನಿಂದ ಹೊರಹೋದ ದುಷ್ಕರ್ಮಿ ನಂತರ ಒಳಗೆ ಬಂದು ವಸಂತ್‌ಕುಮಾರ್ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾ‌ನೆ. ಗುಂಡಿನ ಸದ್ದಿಗೆ ಸಿನಿಮಾ ನೋಡುತ್ತಿದ್ದ ಸಹಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಥಿಯೇಟರ್‌ನಿಂದ ಹೊರಗೆ ಓಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಲ್ಲಿ ಬಿದ್ದಿದ್ದ ಗುಂಡಿನ 2 ಖಾಲಿ ಕೋಕಾಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ವೇಳೆ ವಸಂತ್ ಕುಮಾರ್ ಜತೆಗೆ ಇದ್ದ ಆತನ ಸ್ನೇಹಿತರು ಪಾರಾಗಿದ್ದಾರೆ. ಗಾಯಗೊಂಡ ವಸಂತ್‌ಕುಮಾರ್‌ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಎರಡು ತಂಡಗಳನ್ನು ರೆಡಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

Edited By : Shivu K
PublicNext

PublicNext

20/04/2022 08:28 am

Cinque Terre

127.1 K

Cinque Terre

7