ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PSI ಪರೀಕ್ಷೆ ಅಕ್ರಮ: 3 ಮಹಿಳಾ ಮೇಲ್ವಿಚಾರಕಿಯರು ಸೇರಿ ಮತ್ತೆ 6 ಜನರ ಬಂಧನ

ಕಲಬುರಗಿ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿದಂತೆ ಸಿಐಡಿ ಪೊಲೀಸರು ಮೂವರು ಮಹಿಳಾ ಮೇಲ್ವಿಚಾರಕಿಯರು ಸೇರಿ ಮತ್ತೆ ಆರು ಜನರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ.

ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮಹಿಳಾ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ, ಸಾವಿತ್ರಿ ಹಾಗೂ ಕಲಬುರಗಿ ತಾಲೂಕಿನ ಹಾಲ್ ಸುಲ್ತಾನ್‌ಪುರ ನಿವಾಸಿ ಅರುಣ್ ಪಾಟೀಲ್, ಆಳಂದ ತಾಲೂಕಿನ ಚೇತನ್ ನಂದಗಾಂವ್, ರಾಯಚೂರ ಮೂಲದ ಪ್ರವೀಣ್ ಕುಮಾರ್ ಕೆ ಬಂಧಿತ ಆರೋಪಿಗಳು. ಈಗಾಗಲೇ ಎಲ್ಲ ಆರೋಪಿಗಳನ್ನು ಪೊಲೀಸರು ಜೆಎಮ್ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಕ್ಟೋಬರ್‌ನಲ್ಲಿ 545 ಪಿಎಸ್‍ಐ ನೇಮಕಾತಿ ಪರೀಕ್ಷೆ ಕಲಬುರಗಿಯ ಗೋಕುಲ ನಗರದಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿಯೂ ನಡೆದಿತ್ತು. ಈ ವೇಳೆ ಭಾರಿ ಅಕ್ರಮ ನಡೆರದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಸಿಐಡಿ ಪೊಲೀಸರು ಸೇಡಂ ಮೂಲದ ಎಎಸ್ಐ ಪುತ್ರ ವೀರೇಶ್ ಎಂಬ ಅಭ್ಯರ್ಥಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈಗ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

Edited By : Vijay Kumar
PublicNext

PublicNext

17/04/2022 07:35 am

Cinque Terre

228.19 K

Cinque Terre

6