ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಟ್ಕಾ ವ್ಯಾಪಾರಿ ಮನೆ ಮೇಲೆ ರೇಡ್-ಬೆಡ್ ಕೆಳಗೆ 6 ಕೋಟಿ ಪತ್ತೆ

ಲಕ್ನೋ: ಗುಟ್ಕಾ ಅನ್ನೋದು ಈಗ ಚಟ ಚಕ್ರವರ್ತಿಗಳ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಇಂತಹ ಗುಟ್ಕಾದ ವ್ಯಾಪ್ಯಾರಿ ಮನೆ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆಗ ಅಲ್ಲಿ ಏನ್ ಸಿಕ್ಕಿದೆ ಗೊತ್ತೇ ? ಬನ್ನಿ, ಹೇಳ್ತಿವಿ.

ಉತ್ತರ ಪ್ರದೇಶದ ಹಮೀರಪುರದ ಗುಟ್ಕಾ ವ್ಯಾಪಾರಿಯ ಮನೆ ಮೇಲೆ ಸಿಜಿಎಸ್‌ಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆಗ ಆ ವ್ಯಾಪಾರಿಯ ಮನೆಯ ಬೆಡ್ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆ ಆಗಿದೆ. ಅದರ ಒಟ್ಟು ಲೆಕ್ಕ 6 ಕೋಟಿ 31 ಲಕ್ಷ ಹಾಕಿದೆ ನೋಡಿ.

ಅಧಿಕಾರಿಗಳು ಈ ನೋಟುಗಳನ್ನ ಎಣಿಸಲು ಕೌಂಟಿಂಗ್ ಮಷಿನ್‌ಅನ್ನೇ ತರಿಸಿದ್ದರು. ಹಾಗೆ ರಾಶಿ ರಾಶಿ ದುಡ್ಡಿನ ನಡುವೇನೆ ಅಧಿಕಾರಿಗಳು ಕುಳಿತಿದ್ದಾರೆ. ಆ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸತತ 18 ಗಂಟೆಗಳ ಕಾಲ ದುಡ್ಡನ್ನ ಎಣಿಕೆ ಮಾಡಿದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕೊಡಲು ನಿರಾಕರಿಸಿದ್ದು, ವಾರೆಂಟ್ ಆಧಾರದ ಮೇಲೆನೇ ರೇಡ್ ಮಾಡಿದ್ದೇವೆ ಅಂತಲೇ ಹೇಳಿ ಹೊರಟು ಹೋಗಿದ್ದಾರೆ.

Edited By :
PublicNext

PublicNext

16/04/2022 04:33 pm

Cinque Terre

83.32 K

Cinque Terre

3

ಸಂಬಂಧಿತ ಸುದ್ದಿ