ಲಕ್ನೋ: ದೇಶಿ ನಿರ್ಮಿತ ಪಿಸ್ತೂಲ್ ಹೊಂದಿದ್ದ 19 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಮೈನ್‍ಪುರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕರಿಷ್ಮಾ ಸಿಂಗ್ ಯಾದವ್ ಎಂದು ಗುರುತಿಸಲಾಗಿದ್ದು, ಈಕೆ ಫಿರೋಜಾಬಾದ್‍ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆದರೆ ಕೆಲವು ಕೆಲಸಗಳ ಮೇಲೆ ಮಂಗಳವಾರ ಮೈನ್ಪುರಿಗೆ ಬಂದಿದ್ದಳು. ಈ ವೇಳೆ ಕೊತ್ವಾಲಿ ಪ್ರದೇಶದಲ್ಲಿ ಕರಿಷ್ಮಾ ಸಿಂಗ್ ಪಿಸ್ತೂಲ್ ಹಿಡಿದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕರಿಷ್ಮಾ ಸಿಂಗ್ ಯಾದವ್‌ರನ್ನು ಹಿಂಬಾಲಿಸಿ ಪಿಸ್ತೂಲ್ ಪತ್ತೆ ಹಚ್ಚಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
PublicNext
13/04/2022 04:36 pm