ದಾವಣಗೆರೆ : ಮದ್ಯ ಸೇವನೆ ಮಾಡಲು ಹಣ ನೀಡದಿದ್ದಕ್ಕೆ ತಂದೆಯನ್ನೇ ಪುತ್ರ ಕೊಂದಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.
ಸದ್ಯ ತಂದೆ ಮಂಜಪ್ಪ ಹತ್ಯೆಗೀಡಾಗಿದ್ದು ಆರೋಪಿ ಮಗ ನರಸಿಂಹಪ್ಪನನ್ನು ಬಂಧಿಸಲಾಗಿದೆ.
ರಾತ್ರಿ ಮನೆಗೆ ಬಂದ ನರಸಿಂಹಪ್ಪ ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ಆಗ ತಂದೆ ತನ್ನ ಬಳಿ ಹಣ ಇಲ್ಲ. ಊಟ ಮಾಡಿ ಮಲಗು ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ನರಸಿಂಹಪ್ಪ ಕುಪಿತಗೊಂಡು ತಂದೆಯನ್ನು ಎಳೆದಾಡಿ ಕೆಳಕ್ಕೆ ಬೀಳಿಸಿದ್ದಾನೆ. ಅವರ ಎದೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ಮಂಜಪ್ಪ ಮೃತಪಟ್ಟಿರುವುದಾಗಿ ಮಂಜಪ್ಪನ ಪತ್ನಿ ದೂರು ನೀಡಿದ್ದಾರೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.
ಸ್ಥಳಕ್ಕೆ ಪಿಎಸ್ ಐ ಬಸವರಾಜ್ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ನರಸಿಂಹಪ್ಪನನ್ನು ಬಂಧಿಸಿದ್ದಾರೆ.
PublicNext
09/04/2022 01:27 pm