ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿಯಲ್ಲಿ ಪಾಕಿಸ್ತಾನದ ಕರೆನ್ಸಿ ಪತ್ತೆ

ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಕರೆನ್ಸಿ ಪತ್ತೆಯಾಗಿದೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮದ್ ಅಲಿ ಜಿನ್ನಾ ಭಾವಚಿತ್ರವಿರುವ ನೋಟು 10 ರೂಪಾಯಿ ಮುಖ ಬೆಲೆ ಹೊಂದಿದ ನೋಟು ಇದಾಗಿದ್ದು ಚಿಕ್ಕೋಡಿ ಪೊಲೀಸರಿಂದ ಪರಿಶೀಲನೆ ನಡೆದಿದೆ.

ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ ದೇಶದ ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸದ್ಯದ ವಾತಾವರಣದಲ್ಲಿ ನೋಟು ಸಿಕ್ಕಿದ್ದು ಸಂಚಲನಕ್ಕೆ ಕಾರಣವಾಗಿದೆ. ಇನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ನೋಟು ಸಿಕ್ಕ ಬಳಿಕ ಪೊಲೀಸ್ ಇಲಾಖೆ ಹಾಗೂ ನಾಗರಿಕರಲ್ಲಿ ಸಂಚಲನ ಸೃಷ್ಟಿಸಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

Edited By : Shivu K
PublicNext

PublicNext

09/04/2022 08:52 am

Cinque Terre

162.56 K

Cinque Terre

11

ಸಂಬಂಧಿತ ಸುದ್ದಿ