ಲಕ್ನೋ: ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಸ್ವಾಮೀಜಿಯೊಬ್ಬರ ವಿರುದ್ಧ ಕೊನೆಗೂ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಸೀತಾಪುರದಲ್ಲಿನ ಕಾರ್ಯಕ್ರಮದ ದೃಶ್ಯ ಇದಾಗಿದ್ದು, ಸ್ವಾಮೀಜಿ ಹೇಳಿಕೆಗೆ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿರುವುದು ಕಾಣುತ್ತದೆ. ವಿಡಿಯೋ ವೈರಲ್ ಆದ ನಂತರ ಇದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದು 6 ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಯಾವುದೇ ಮುಸ್ಲಿಂ ಪುರುಷ ಹಿಂದೂ ಮಹಿಳೆಯರನ್ನು ಹಿಂಬಾಲಿಸಿದರೆ, ನಾನು ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಬಹಿರಂಗವಾಗಿ ಅತ್ಯಾಚಾರ ಮಾಡುತ್ತೇನೆ" ಎಂದು ಸ್ಥಳೀಯ ದೇವಸ್ಥಾನದ ಮಹಂತ್ ಬಜರಂಗದಾಸ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಹೇಳಿದ್ದಾರೆ.
ಈ ವಿಡಿಯೊವನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಅಧಿಕೃತ ಹ್ಯಾಂಡಲ್‌ಗೆ ಟ್ಯಾಗ್ ಮಾಡಲಾಗಿದೆ. 41 ಸೆಕೆಂಡುಗಳ ಕ್ಲಿಪ್‌ನಲ್ಲಿ, ಹಿನ್ನಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯನ್ನು ಸಹ ಕಾಣಬಹುದು.
PublicNext
08/04/2022 04:59 pm