ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಪೊಲೀಸರ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ಸತ್ತು ಹೋದ ರೌಡಿ ಶೀಟರ್

ರಾಮನಗರ: ನಿನ್ನೆ ರಾತ್ರಿ ಪೊಲೀಸ್ರು ಡ್ರಿಂಕ್ ಆ್ಯಂಡ್ ಡ್ರೈವ್‌ ತಪಾಸಣೆ ಮಾಡ್ತಿದ್ದಾಗ ತಪ್ಪಿಸಿಕೊಳ್ಳಲು ಹೋಗಿ ರೌಡಿ ಶೀಟರ್ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ.

ಮಾದನಾಯಕನಹಳ್ಳಿ ರೌಡಿ ಶೀಟರ್ ಆಗಿದ್ದ ದಿಲೀಪ್ ಸಾವನ್ನಪ್ಪಿದ್ದಾನೆ. ಬಸವನಪುರ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ತಾಪಸಣೆ ವೇಳೆ ಕಾರಿನಲ್ಲಿದ್ದ 4 ಜನ್ರು ಓಡಿ ಹೋಗಲು ಯತ್ನಿಸಿದ್ದಾರೆ. ಇದ್ರಲ್ಲಿ ಮೂರು ಜನ ಲಾಕ್ ಆದ್ರೆ ದಿಲೀಪ ಮಾತ್ರ ಪೊಲೀಸ್ರ ಭಯದಿಂದ ಕಾರ್‌ನಿಂದ ಇಳಿದು ಕಾಲಕ್ತಿದ್ದ, ಪೊಲೀಸ್ರೂ ಕೂಡ ಈ ವೇಳೆ ರೈಲ್ವೆ ಹಳಿ ಕ್ರಾಸ್ ಮಾಡುವಾಗ ಟ್ರೈನ್ ಗೆ ಸಿಲುಕಿದ್ದಾನೆ.

ಕಾರಿನಲ್ಲಿದ್ದವರೆಲ್ರೂ ರೌಡಿ ಶೀಟರ್ ಗಳೆಂದು ಹೇಳಲಾಗ್ತಿದೆ. ಕೆ.ಟಿ.ಎಂ ಭರತ ರವಿ ಸೇರಿ ಎಲ್ಲರೂ ಕೇಸ್ ಹಿನ್ನೆಲೆ ರಾಮನಗರ ಜೈಲಿಗೆ ಸೈನ್ ಮಾಡಲು ತೆರಳಿದ್ರು.‌ಸೈನ್ ಮಾಡಿ ಎಣ್ಣೆ ಪಾರ್ಟಿ ಮಾಡಿ ಮೈಸೂರು ಕಡೆ ಹೋಗ್ತಿದ್ದಾಗಿ ಪೊಲೀಸ್ರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಇನ್ನೂ ಮೃತ ದಿಲೀಪ್ ಅಣ್ಣ ಗುರು@ಸ್ಕೋಪಿ ಕೂಡ ಕಾಮಾಕ್ಷಿಪಾಳ್ಯ ರೌಡಿಶೀಟರ್ ಆಗಿದ್ದ. ಆತ ಕೂಡ ಕೆಲ ವರ್ಷದ ಹಿಂದೆ ಮರ್ಡರ್ ಆಗಿದ್ದ.

ಆದ್ರೆ ಹಿಂದೆ ಕಾರ್ ನಲ್ಲಿದ್ದವು ಕೂಡ ಎಸ್ಕೇಪ್ ಆಗಿರೋದು ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ರಾಮನಗರ ಗ್ರಾಮಾಂತರ ಪೊಲೀಸ್ರು ತನಿಖೆ ನಡೆಸ್ತಿದ್ದು, ರೌಡಿ ಶೀಟರ್ ಚಲನವಲನದ ಬಗ್ಗೆ ತನಿಖೆ ನಡೆಸ್ತಿದ್ದಾರೆ.ಘಟನಾ ಸ್ಥಳಕ್ಕೆ ಸ್ವತಃ ರಾಮನಗರ ಎಸ್ಪಿ ಸಂತೋಷ್ ಬಾಬು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

Edited By : Shivu K
PublicNext

PublicNext

08/04/2022 11:56 am

Cinque Terre

137.84 K

Cinque Terre

1

ಸಂಬಂಧಿತ ಸುದ್ದಿ