ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಕುಡುಕ ಕಳ್ಳ !

ಆಂಧ್ರ ಪ್ರದೇಶ: ನಾವು ಮಾಡಿದ ಪಾಪ ಕರ್ಮಗಳಿಗೆ ಶಿಕ್ಷೆ ಕಂಡಿತಾ ಸಿಗುತ್ತದೆ. ಅದರಲ್ಲೂ ದೇವರ ಸನ್ನಿಧಿಯಲ್ಲಿ ಕಳ್ಳತನ ಮಾಡಿದ್ರೆ ಮುಗಿದೆ ಹೋಯಿತು. ದೇವರು ಕಂಡಿತ ಶಿಕ್ಷೆ ಕೊಟ್ಟೇ ಬಿಡ್ತಾನೆ ಅನ್ನೋ ನಂಬಿಕೆ ಇದೆ. ಅಂತಹ ಒಂದು ಘಟನೆ ಈಗ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಇದು ಅದೆಷ್ಟೊ ನಿಜವೋ ಏನೋ ಗೊತ್ತಿಲ್ಲ. ಆದರೆ ಆರ್.ಪಾಪ ರಾವ್ ಎಂಬ 30 ವರ್ಷದ ವ್ಯಕ್ತಿಗೆ ಶಿಕ್ಷೆ ಆಗಿದೆ. ಇಲ್ಲಿಯ ಜಾಮಿ ಎಲ್ಲಮ್ಮ ದೇವಸ್ಥಾನದ ಬೆಳ್ಳಿ ಆಭರಣಗಳನ್ನ ಕದಿಯಲು ಪ್ಲಾನ್ ಮಾಡಿದ್ದಾನೆ. ದೇವಸ್ಥಾನದ ಗೋಡೆಗೂ ಒಂದು ರಂಧ್ರವನ್ನೂ ಕೊರೆದಿದ್ದಾನೆ.

ದುರಂತ ನೋಡಿ, ಇದೇ ರಂಧ್ರದಲ್ಲಿಯೇ ಈಗ ಈ ಕಳ್ಳ ಸಿಲುಕಿಕೊಂಡಿದ್ದಾನೆ. ಇದನ್ನ ಕಂಡ ಜನ ಈಗ ಕಳ್ಳನ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ.ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಕಳ್ಳನಿಗೆ ದೇವಿನೇ ಶಿಕ್ಷೆ ಕೊಟ್ಟಿದ್ದಾಳೆ ಅಂತಲೂ ಜನ ಮಾತನಾಡಿಕೊಳ್ತಿದ್ದಾರೆ.ಅಂದ್ಹಾಗೆ ಈ ಕಳ್ಳನಿಗೆ ಕುಡಿತದ ಚಟ ಇದೆ. ಅದಕ್ಕಾಗಿಯೇ ಕಳ್ಳತನದ ಪ್ಲಾನ್ ಮಾಡಿದ್ದಾನೆ. ರಂಧ್ರದಲ್ಲೂ ಸಿಲುಕಿಕೊಂಡು ಪೇಚಾಡಿದ್ದಾನೆ.

Edited By : Shivu K
PublicNext

PublicNext

07/04/2022 10:32 am

Cinque Terre

89.87 K

Cinque Terre

12

ಸಂಬಂಧಿತ ಸುದ್ದಿ