ಮುಲ್ಕಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮುಲ್ಕಿ ಪೊಲೀಸರು ಮೊಬೈಲ್ ಕಳ್ಳನನ್ನು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ
ಆರೋಪಿಯನ್ನು ಮೂಲತಃ ಹುಬ್ಬಳ್ಳಿ ನಿವಾಸಿ ಪಕ್ಷಿಕೆರೆ ಕೊಯಿಕೊಡೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಲಿಂಗಪ್ಪ ಎಂದು ಗುರುತಿಸಲಾಗಿದೆ.
ಮುಲ್ಕಿ ಸಮೀಪದ ಅಂಗರಗುಡ್ಡೆ ನಿವಾಸಿ ಹರೀಶ್ ಪೂಜಾರಿ ಎಂಬವರು ಕಿನ್ನಿಗೋಳಿಯಲ್ಲಿ ಮನೆಯೊಂದರ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು 6 ಜನ ಕೆಲಸದವರು ಇದ್ದರು.
ಈ ಸಂದರ್ಭ ಕೆಲಸದವರಲ್ಲಿ ಒಬ್ಬ ಹರೀಶ್ ರವರ ಸುಮಾರು 16 ಸಾವಿರ ರೂಪಾಯಿಗಳ ಮೌಲ್ಯದ ಮೊಬೈಲ್ ಎಗರಿಸಿದ್ದಾನೆ.
ಈ ಬಗ್ಗೆ ಹರೀಶ್ ತೀವ್ರ ಹುಡುಕಾಟ ನಡೆಸಿದ್ದರೂ ಮೊಬೈಲ್ ಪತ್ತೆಯಾಗದೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳ್ಳತನ ಪತ್ತೆ ಹಚ್ಚಲು ಕೂಡಲೇ ಮುಲ್ಕಿ ಠಾಣಾ ಎಎಸ್ಐ ಚಂದ್ರಶೇಖರ್ , ಸಿಬ್ಬಂದಿಗಳಾದ ಸಿದ್ದು, ಚಂದ್ರಶೇಖರ್ ಕಾರ್ಯಪ್ರವೃತ್ತರಾಗಿ ಮೊಬೈಲ್ ಲೊಕೇಶನ್ ಮುಖಾಂತರ ಆರೋಪಿ ಲಿಂಗಪ್ಪ ಎಂಬಾತನನ್ನು ಪಕ್ಷಿಕೆರೆ ಬಳಿಯ ಕೊಯಿಕುಡೆ ಆತನ ಮನೆಯಲ್ಲಿ ಪತ್ತೆಹಚ್ಚಿ ಬಂಧಿಸಿ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.
ಕ್ಷಿಪ್ರಗತಿಯಲ್ಲಿ ಮುಲ್ಕಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
PublicNext
06/04/2022 09:03 pm