ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವತಿಯರ ಜೊತೆ ಯುವಕರ ನಂಗಾನಾಚ್ : ಕೇಸರಿ ವಸ್ತ್ರಕ್ಕೆ ಅವಮಾನ

ಚಿಕ್ಕೋಡಿ : ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನಮಾನ ನೀಡುವ ನಾಡಿನಲ್ಲಿ ಬಹಿರಂಗವಾಗಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಯುವತಿಯರ ಅಶ್ಲೀಲ ನೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.

ಇನ್ನು ಯುವಕರು ಕೈಯಲ್ಲಿ ಕೇಸರಿ ಶಲ್ಯ ಹಿಡಿದು ಈ ಯುವತಿಯರ ಜೊತೆ ಹೆಜ್ಜೆ ಹಾಕಿರುವುದು ಅನೇಕರ ಕೆಂಗಣಿಗೆ ಗುರಿಯಾಗಿದೆ. ಈ

ಅಶ್ಲೀಲ ನೃತ್ಯಕ್ಕೆ ಅನುಮತಿ ನೀಡಿದವರು ಯಾರು? ಎನ್ನುವ ಪ್ರಶ್ನೆ ಸಾಮಾನ್ಯವಾಗಿದೆ.ಬೆಳಗಾವಿ ಜಿಲ್ಲೆಯ ಮುಗಳಖೋಡ ಪಟ್ಟಣದಲ್ಲಿ ಕಬ್ಬು ಬೆಳೆ ಕಟಾವು ಮಾಡಿದ ಸಂಭ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿದ್ದು, ಇವರ ಅಶ್ಲೀಲ ನೃತ್ಯದಲ್ಲಿ ಕೇಸರಿ ವಸ್ತ್ರವನ್ನು ಕೀಳುಮಟ್ಟಕ್ಕೆ ಬಳಸಿರುವುದು ವಿರೋಧಕ್ಕೆ ಕಾರಣವಾಗಿದೆ.

ಬಿಜೆಪಿ ಶಾಸಕ ಪಿ ರಾಜೀವ್ ಕ್ಷೇತ್ರದಲ್ಲಿ ಕೇಸರಿ ವಸ್ತ್ರ ಉಟ್ಟು ಯುವಕರಿಂದ ಈ ರೀತಿಯ ಅಶ್ಲೀಲ ಕೃತ್ಯದ ವಿಡಿಯೋ ಹರಿದಾಡುತ್ತಿದ್ದರು ತಾಲೂಕಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಮುಜುಗರ ತರುವಂತ ಈ ರೀತಿಯಲ್ಲಿ ನೃತ್ಯ ಕಂಡು ಸುಮ್ಮನಿರುವ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೋಲಿಸ್ ಠಾಣಾ ವ್ಯಾಪ್ತಿಯ ಮುಗಳಖೋಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

04/04/2022 10:55 pm

Cinque Terre

81.01 K

Cinque Terre

59

ಸಂಬಂಧಿತ ಸುದ್ದಿ