ಕೊಪ್ಪಳ: ನಾಲ್ವರು ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ವೀರೇಶ್ (35) ಕೊಲೆಯಾದ ಯುವಕ. ವೀರೇಶ್ ಮೇಲೆ ನಾಲ್ಕು ಜನರ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಪರಾರಿಯಾಗಿದೆ. ಕಾರಟಗಿ ಪಟ್ಟಣದ ಹೊರವಲಯದ ಹಳೇ ಬಸ್ ನಿಲ್ದಾಣದ ಬಳಿ ಈ ಕೃತ್ಯ ನಡೆದಿದೆ. ನಾಪತ್ತೆ ಆಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಪ್ಪಳ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
04/04/2022 04:50 pm