ಚಿಕ್ಕಮಗಳೂರು: ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಾನವಿ(27) ಮೃತಪಟ್ಟ ನವವಿವಾಹಿತೆ. ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರಗೌಡ ಅವರೇ ನಮ್ಮ ಮಗಳಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ವರ್ಷವಷ್ಟೇ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿಯನ್ನ ನಂದೀತ್ ಮದುವೆಯಾಗಿದ್ದ. ಅನೇಕ ಬಾರಿ ಹಣ ತರುವಂತೆ ಪತಿ ನಂದೀತ್ ದೈಹಿಕ ಕಿರುಕುಳ ನೀಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇತ್ತೀಚಿಗಷ್ಟೇ ಗಾನವಿ ತಂದೆ ಲೋಕಪ್ಪಗೌಡ ಅಳಿಯ ನಂದಿತ್‌ಗೆ 2 ಲಕ್ಷ ಹಣ ನೀಡಿದ್ದ ಎಂಬ ಮಾಹಿತಿ ಇದೆ. ಹಲ್ಲೆ ಮಾಡಿರೋದನ್ನ, ಬೈದಿದ್ದನ್ನ ಗಾನವಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಪತಿ ಹಾಗೂ ಪತಿಯ ಮನೆಯವರು ಗಾನವಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/04/2022 08:47 pm