ದಾವಣಗೆರೆ: 60 ವರ್ಷದ ವೃದ್ಧೆಯ ಮೇಲೆ ಮೊಮ್ಮಗನೇ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಎ.ಕೆ.ಕಾಲೋನಿಯಲ್ಲಿ ನಡೆದಿದೆ.
ಆಂಜನೇಯ (22) ಅಲಿಯಾಸ್ ಮೋಹನ ಅಜ್ಜಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿ. ಈತ ಕೋಲಾರದಿಂದ ಒಂದು ತಿಂಗಳ ಹಿಂದಷ್ಟೆ ಅರಕೆರೆ ಗ್ರಾಮಕ್ಕೆ ಬಂದು ನೆಲಸಿದ್ದ ಎಂದು ತಿಳಿದು ಬಂದಿದೆ. ಮಾರ್ಚ್ 30ರ ರಾತ್ರಿ ಮನೆಯಲ್ಲಿ ವೃದ್ಧೆ ಮಲಗಿದ್ದ ವೇಳೆ ಆಕೆಯ ಅಕ್ಕನ ಮಗಳ ಮಗ (ಆಂಜನೇಯ) ಈ ಕೃತ್ಯ ಎಸಗಿದ್ದಾನೆ.
ಪಾಪಿಯ ಕೃತ್ಯದಿಂದ ಗಾಯಗೊಂಡ ವೃದ್ಧೆಗೆ ಹೊನ್ನಾಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹೊನ್ನಾಳಿ ಸಿಪಿಐ ಟಿ.ವಿ.ದೇವರಾಜ್ ಅಚರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
PublicNext
02/04/2022 10:32 am