ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಮಿಗಳ ಜಗಳ ಬಿಡಿಸಲು ಬಂದು ಯುವತಿಗೆ ಮನಬಂದಂತೆ ಥಳಿಸಿದ ಫುಡ್ ಡೆಲಿವರಿ ಬಾಯ್.!

ಭುವನೇಶ್ವರ: ಪ್ರೇಮಿಗಳ ನಡುವಿನ ವಿವಾದ ಬಗೆಹರಿಸಲು ಬಂದ ಫುಡ್ ಡೆಲಿವರಿ ಬಾಯ್ ಸ್ವತಃ ಜಗಳಕ್ಕೆ ನಿಂತ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಫುಡ್ ಡೆಲಿವರಿ ಬಾಯ್ ಯುವತಿಗೆ ಮನಬಂದಂತೆ ಥಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೌದು. ಭುವನೇಶ್ವರದ ಇಂದಿರಾ ಪಾರ್ಕ್‌ಗೆ ಬಂದಿದ್ದ ಜೋಡಿಯು ಪರಸ್ಪರ ಜಗಳವಾಡುತ್ತಿದ್ದರು. ಈ ಅಲ್ಲಿಗೆ ಬಂದಿದ್ದ ಫುಡ್ ಡೆಲಿವರಿ ಬಾಯ್ ಜಗಳ ಬಿಡಿಸಲು ಮುಂದಾಗುತ್ತಾರೆ. ಆದರೆ ಯುವತಿ ಡೆಲಿವರಿ ಬಾಯ್ ಜೊತೆ ಜಗಳ ಆರಂಭಿಸಿ, ಅವಾಚ್ಯ ಪದಗಳಿಂದ ಬೈಯುತ್ತಾಳೆ. ಅಷ್ಟರಲ್ಲಿ ಡೆಲಿವರಿ ಬಾಯ್ ತಾಳ್ಮೆ ಕಳೆದುಕೋಂಡು ಯುವತಿಗೆ ಥಳಿಸಿದ್ದಾನೆ. ಈ ವೇಳೆ ಗುಂಪು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದೆ. ನಂತರ ಇವರಿಬ್ಬರೂ ಪೊಲೀಸರಿಗೆ ದೂರು ನೀಡಿಲ್ಲ. ವಿಡಿಯೋ ವೈರಲ್ ಆದ ಬಳಿಕ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಭುವನೇಶ್ವರ ಡಿಸಿಪಿ ಉಮಾ ಶಂಕರ್ ತಿಳಿಸಿದ್ದಾರೆ.

Edited By : Shivu K
PublicNext

PublicNext

01/04/2022 07:15 pm

Cinque Terre

64.51 K

Cinque Terre

1

ಸಂಬಂಧಿತ ಸುದ್ದಿ